ಸಂಗೀತಾಗೆ ಗ್ರಹಚಾರ ಬಿಡಿಸಿ ವಾರ್ನಿಂಗ್‌ ಕೊಟ್ಟ ಕಿಚ್ಚ ಸುದೀಪ್..‌ ಆ ಮಾತು ಆಡಬಾರದಿತ್ತು.. 

0 views

ಬಿಗ್‌ ಬಾಸ್‌ ಸೀಸನ್ ಹತ್ತು ಒಂದಲ್ಲಾ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇದೆ.. ಅದರಲ್ಲೂ ಈ ಸೇಸನ್‌ ಕಳೆದ ನಾಲ್ಕೈದು ಸೀಸನ್ ಗಳಲ್ಲಿಯೇ ಅತ್ಯಧಿಕ ಟಿ ಆರ್‌ ಪಿ ಪಡೆದುಕೊಂಡಿದ್ದು ಒಂದು ಕಡೆ ಬಿಗ್‌ ಬಾಸ್‌ ತಂಡ ಸಂಭ್ರಮ ಪಟ್ಟರೆ ಮತ್ತೊಂದು ಕಡೆ ಈ ಸೀಸನ್‌ ತುಂಬೆಲ್ಲಾ ಜಗಳವೇ ತುಂಬಿದ್ದು ಆ ಜಗಳಗಳಿಂದಲೇ ವಾಹಿನಿಗೆ ಈ ಶೋ ನ ಟಿ ಆರ್‌ ಪಿ ಹೆಚ್ಚಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.. ಅದೇನೇ ಆಗಲಿ ಈ ಬಾರಿಯ ಬಿಗ್‌ ಬಾಸ್‌ ಶೋ ನೋಡುಗರ ಸಂಖ್ಯೆಯಂತೂ ಅಧಿಕವಾಗಿದ್ದು ಅದರಲ್ಲಿಯೂ ಕಿಚ್ಚ ಸುದೀಪ್‌ ಅವರ ವಾರಾಂತ್ಯದ ಸಂಚಿಕೆಗಳೂ ನಿರೀಕ್ಷೆಗೂ ಮೀರಿ ರೇಟಿಂಗ್‌ ಪಡೆದು ಅಚ್ಚರಿ ಮೂಡಿಸಿದೆ.. ಮನೆಲ್ಲಿ ವಾರ ಪೂರ್ತಿ ಜಗಳವಾಡಿದ ಸ್ಪರ್ಧಿಗಳಿಗೆ ವಾರಾಂತ್ಯದಲ್ಲಿ ವಾರದ ಕತೆ ಕಿಚ್ಚ ಸುದೀಪನ ಜೊತೆ ಸಂಚಿಕೆಯಲ್ಲಿ ಸುದೀಪ್‌ ಅವರು ಸ್ಪರ್ಧಿಗಳು ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿ ಸರಿಯಾಗಿ ತರಾಟೆಗೆ ತೆಗೆದುಕೊಂಡು ಅವರುಗಳ ಮುಖಕ್ಕೆ ಹೊಡೆದಂತೆ ಗ್ರಹಚಾರ ಬಿಡಿಸೋದು ಒಂದು ರೀತಿ ಜನರುಗೆ ಬಹಳ ಇಷ್ಟವಾಗಿದೆ ಎನ್ನಬಹುದು.. ಅದರಲ್ಲೂ ಕೆಲ ಸನ್ನಿವೇಶಗಳಲ್ಲಿ ಬಳೆ ವಿಚಾರವಾಗಿರಬಹುದು ಅಥವಾ ಮತ್ತೊಂದಷ್ಟು ಸೂಕ್ಷ್ಮ ವಿಚಾರವಾಗಿರಬಹುದು ಸುದೀಪ್‌ ಅವರು ಪ್ರಬುದ್ಧರಾಗಿ ನಡೆದುಕೊಳ್ಳುವ ರೀತಿ ಆಡುವ ಮಾತುಗಳು ಜನರಿಗೆ ಮತ್ತಷ್ಟು ಇಷ್ಟವಾಗುತ್ತಿದೆ.. ಅದೇ ರೀತಿಯಾಗಿ ಈ ವಾರ ಸಂಗೀತಾಗೆ ಕಿಚ್ಚ ಸುದೀಪ್‌ ಅವರು ವಾರ್ನಿಂಗ್‌ ಕೊಟ್ಟು ತಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದಿದ್ದಾರೆ..

ಹೌದು ಎಲ್ಲರಿಗೂ ತಿಳಿದಿರುವಂತೆ ಕಳೆದ ವಾರ ಬಿಗ್‌ ಬಾಸ್‌ ಮನೆಗೆ ಯಾವುದೇ ಕ್ಯಾಪ್ಟನ್‌ ಇರಲಿಲ್ಲ.. ಎರಡು ವಾರದ ಹಿಂದೆ ಬಿಗ್‌ ಬಾಸ್‌ ಮನೆಗೆ ಕ್ಯಾಪ್ಟನ್‌ ಆಗಿದ್ದ ಸ್ನೇಹಿತ್‌ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ ಸಂಗೀತಾ ಹಾಗೂ ಪ್ರತಾಪ್‌ ಆಸ್ಪತ್ರೆ ಸೇರುವಂತಾಗಿತ್ತು.. ಹಾಗೇ ಮನೆಯ ಸದಸ್ಯರು ಒಬ್ಬ ಕ್ಯಾಪಟ್ನ್‌ ಅನ್ನು ಸರಿಯಾಗಿ ಗೌರವಿಸಿರಲಿಲ್ಲ.. ಇದರ ಜೊತೆಗೆ ಮುಖ್ಯವಾಗಿ ವರ್ತೂರು ಸಂತೋಷ್‌ ಅವರು ಮೋಸ ಮಾಡಿ ಮನೆಯ ಕ್ಯಾಪ್ಟನ್‌ ಆಗಿದ್ದರು.. ವಿನಯ್‌ ನ ಸಹಾಯ ಪಡೆದು ಬಿಗ್‌ ಬಾಸ್‌ ಗೆ ಮೋಸ ಮಾಡಿ ಕ್ಯಾಪ್ಟನ್‌ ಆಗಿದ್ದ ವರ್ತೂರು ಸಂತೋಷ್‌ ಅವರ ನಡವಳಿಕೆ ಯಿಂದ ಕೋಪಗೊಂಡ ಕಿಚ್ಚ ಸುದೀಪ್‌ ಅವರು ಕಳೆದ ವಾರಾಂತ್ಯದ ಶೋ ನಲ್ಲಿಯೇ ವರ್ತೂರು ಸಂತೋಷ್‌ ಅವರನ್ನು ಕ್ಯಾಪ್ಟನ್‌ ರೂಮಿನಿಂದ ಖಾಲಿ ಮಾಡಿಸಿ ಆ ರೂಮಿಗೆ ಬೀಗ ಹಾಕಿಸಿದ್ದರು.. ಇನ್ನು ಮನೆಯಲ್ಲಿ ಯಾರೂ ಕ್ಯಾಪ್ಟನ್‌ ಇರುವುದಿಲ್ಲ ಎಂದಿದ್ದರು.. ಅದರಂತೆಯೇ ಕಳೆದ ವಾರ ಬಿಗ್‌ ಬಾಸ್‌ ಮನೆಯಲ್ಲಿ ಯಾರೂ ಸಹ ಕ್ಯಾಪಟ್ನ್‌ ಇರಲಿಲ್ಲ.. ಆದರೆ ಈ ವಾರ ಅಂದರೆ ನಿನ್ನೆಯ ಸಂಚಿಕೆಯಲ್ಲಿ ಈ ಬಗ್ಗೆ ವರ್ಚೆ ನಡೆಸಿ ಇನ್ನು ಮುಂದೆ ಕ್ಯಾಪ್ಟನ್ಸಿಗೆ ಗೌರವ ನೀಡುವುದಾದರೆ ಮಾತ್ರ ಕ್ಯಾಪ್ಟನ್‌ ಆಗಬಹುದು ಎನ್ನುವ ಮಾತಿಗೆ ಮನೆಯ ಸದಸ್ಯರೆಲ್ಲಾ ಒಪ್ಪಿಕೊಂಡರು..

ಇನ್ನು ಇದೇ ವಿಚಾರವಾಗಿ ಚರ್ಚೆ ಮಾಡುವ ಸಮಯದಲ್ಲಿ ಮಾತನಾಡಿದ ನಮ್ರತಾ ಅವರು ಮನೆಯಲ್ಲಿ ಕ್ಯಾಪ್ಟನ್‌ ಬೇಕು.. ಅದರಲ್ಲೂ ಮಹಿಳಾ ಸ್ಪರ್ಧಿಗಳೆಂದರೆ ಇಲ್ಲಿ ಲೆಕ್ಕಕ್ಕೇ ತೆಗೆದುಕೊಳ್ಳೋದಿಲ್ಲ.. ಅದು ಬದಲಾಗಬೇಕು.. ನನಗೂ ಈ ಮನೆಯ ಕ್ಯಾಪ್ಟನ್‌ ಆಗಬೇಕೆಂಬ ಆಸೆ ಇದೆ.. ಅದಕ್ಕಾಗಿ ಕ್ಯಾಪ್ಟನ್ಸಿ ಟಾಸ್ಕ್‌ ಗಳ ಅವಕಾಶ ನೀಡಬೇಕೆಂದು ಕೇಳಿಕೊಂಡರು.. ಈ ಸಮಯದಲ್ಲಿ ಕಿಚ್ಚ ಸುದೀಪ್‌ ಅವರು ಮಾತನಾಡಿ ಈ ಹಿಂದೆ ಸಂಗೀತಾ ಆಡಿದ ಮಾತಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ.. ಹೌದು ಸ್ನೇಹಿತ್‌ ಕ್ಯಾಪ್ಟನ್‌ ಆಗಿದ್ದ ಸಮಯದಲ್ಲಿ ಸಂಗೀತಾ ಅವರು ಪದೇ ಪದೇ ನಿನಗೆ ಸಿಕ್ಕಿರುವ ಕ್ಯಾಪ್ಟನ್ಸಿ ಒಂದು ಭಿಕ್ಷೆ ಎಂದು ಪದೇ ಪದೇ ಚುಚ್ಚಿ ಮಾತನಾಡಿದ್ದರು.. ನಿನಗೆ ಅರ್ಹತೆಯೇ ಇಲ್ಲ ಎಂದೂ ಸಹ ಹೇಳಿದ್ದು ಟಾಸ್ಕ್‌ ಸಮಯದಲ್ಲಿ ಸ್ನೇಹಿತ್‌ ಅವರ ಮೇಲೆ ನೀರೆರಚಿದ್ದೂ ಉಂಟು.. ಇನ್ನು ಇದೇ ವಿಚಾರವಾಗಿ ಈ ವಾರ ಅಂದರೆ ನಿನ್ನೆ ಮಾತನಾಡಿದ ಸುದೀಪ್‌ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಅನ್ನೋದು ಯಾರಿಗೂ ಭಿಕ್ಷೆ ಅಲ್ಲ.. ಕ್ಯಾಪ್ಟನ್‌ ಆದವನು ಕಷ್ಟಪಟ್ಟು ತನ್ನ ಪ್ರಯತ್ನದಿಂದ ಸಂಪಾದನೆ ಮಾಡಿದ ಸ್ಥಾನ ಅದು.. ಅವರಿಗೆ ಸಾಮಾರ್ಥ್ಯ ಇರೋ ಕಾರಣಕ್ಕೆ ಅವರು ಕ್ಯಾಪ್ಟನ್‌ ಆಗಿರುತ್ತಾರೆ.. ಅದಕ್ಕೆ ಮೊದಲಿಉ ಗೌರವ ಕೊಡಿ.. ನೀವು ಈ ಮನೆಯಲ್ಲಿ ಕ್ಯಾಪ್ಟನ್‌ ಆಗಿಲ್ಲ ಅಂದರೆ ಅದು ನಿಮ್ಮ ಸಾಮರ್ಥ್ಯದ ವಿಷಯ.. ಎಂದು ಸಂಗೀತಾಗೆ ವಾರ್ನಿಂಗ್‌ ನೀಡಿದ್ದು ಇನ್ನು ಈ ವಾರ ಎಂದಿನಂತೆ ಕ್ಯಾಪ್ಟನ್ಸಿ ಟಾಸ್ಕ್‌ ನಡೆಯಲಿದ್ದು ಕ್ಯಾಪ್ಟನ್‌ ಆದ ಬಳಿಕ ಕ್ಯಾಪ್ಟನ್ ರೂಮಿನ ಬಾಗಿಲನ್ನು ತೆರೆಯಬಹುದಾಗಿದೆ.. ‌

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.