ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟಿ ತೇಜಸ್ವಿನಿ ಪ್ರಕಾಶ್‌ ಏನಾದರು ಗೊತ್ತಾ?

0 views

ಕನ್ನಡ ಚಿತ್ರರಂಗದ ಕಲಾವಿದರಿಗಿಂತ ಕನ್ನಡ ಕಿರುತೆರೆಯ ಕಲಾವಿದರು ಕೊಂಚ ಹೆಚ್ಚಾಗಿಯೇ ಜನರ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ.. ಸಿನಿಮಾ ಅನ್ನೋದು ಆಗೊಮ್ಮೆ ಹೀಗೊಮ್ಮೆ ಥಿಯೇಟರ್‌ ಗಳಲ್ಲಿ ನೋಡುವುದಾದರೆ ಇತ್ತ ಧಾರಾವಾಹಿಯಾಗಲಿ ಅಥವಾ ರಿಯಾಲಿಟಿ ಶೋಗಳಾಗಲಿ ಪ್ರೇಕ್ಷಕರು ಪ್ರತಿದಿನ ನೋಡುವ ಕಾರಣ ಜನರ ಮನಸ್ಸಿಗೆ ಕಿರುತೆರೆಯ ಕಲಾವಿದರು ಬೇಗನೇ ಹತ್ತಿರವಾಗುವುದಷ್ಟೇ ಅಲ್ಲದೇ ಮನೆಮಾತಾಗಿ ಬಿಡೋದುಂಟು.. ಅದೇ ರೀತಿ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ತಮ್ಮ ಪಾತ್ರದ ಮೂಲಕವೇ ಹತ್ತಿರವಾದವರು ನಟಿ ತೇಜಸ್ವಿನಿ ಪ್ರಕಾಶ್..‌ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರಾವಾಹಿ ಸಾಕಷ್ಟು ವಿಚಾರಗಳಿಂದ ಜನರಿಗೆ ಇಷ್ಟವಾಗಿತ್ತು.. ಶುರುವಿನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಹ ಪಡೆದಿದ್ದ ಧಾರಾವಾಹಿ ವರ್ಷಗಳ ಬಳಿಕ ಮಿಕ್ಕ ಧಾರಾವಾಹಿಗಳಂತೆ ಇಒಇದೂ ಸಹ ಕತೆಯಲ್ಲಿ ಗಟ್ಟಿತನ ವಿಲ್ಲದ ಕಾರಣ ತನ್ನ ರೇಟಿಂಗ್‌ ನಲ್ಲಿ ಪಾತಾಳಕ್ಕೆ ಇಳಿದಿತ್ತು.. ಇನ್ನು ನಾಯಕಿ ಇಂಚರ ಪಾತ್ರ ಅಗಲಿದ್ದು ಅಂತ್ಯ ಸಂಸ್ಕಾರವನ್ನು ಹದಿನೈದು ದಿನಗಳಿಗಿಂತಲೂ ಹೆಚ್ಚು ಸಂಚಿಕೆಯಲ್ಲಿ ತೋರಿಸಿ ತೀರಿಕೊಂಡ ದೇಹಕ್ಕೂ ಮೇಕಪ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದೂ ಉಂಟು..

ಇನ್ನು ಕಲಾವಿದರ ವಿಚಾರಕ್ಕೆ ಬರುವುದಾದರೆ ಪ್ರತಿಯೊಂದು ಪಾತ್ರಧಾರಿಯೂ ಜನರ ಮನಸ್ಸಿಗೆ ಇಷ್ಟವಾಗಿದ್ದು ಈಗಲೂ ಸಹ ಧಾರಾವಾಹಿಉಯ ಹೆಸರಿನಿಂದಲೇರ ಆ ಕಲಾವಿದರುಗಳನ್ನು ಗುರುತಿಸೋದುಂಟು.. ಅದೇ ರೀತಿ ತೇಜಸ್ವಿನಿ ಪ್ರಕಾಶ್‌ ಅವರೂ ಸಹ ಈ ಧಾರಾವಾಹಿಯಲ್ಲಿ ನೆಗಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಸಹ ಸಾಕಷ್ಟು ಜನರಿಗೆ ಇಷ್ಟವಾಗಿದ್ದರು.. ಈ ಹಿಂದೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಜೊತೆಯೂ ಅಭಿನಯಿಸಿದ್ದರೂ ಸಹ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಸಹ ತೇಜಸ್ವಿನಿ ಪ್ರಕಾಶ್‌ ಅವರು ನನ್ನರಸಿ ಧಾರಾವಾಹಿಯ ಮೂಲಕವೇ ಹೆಚ್ಚು ಹೆಸರು ಗಳಿಸಿದ್ದರು.. ಇನ್ನು ಧಾರಾವಾಹಿ ಮುಗಿದ ಬಳಿಕ ಬೇರೆ ಯಾವ ಧಾರಾವಾಹಿಯಲ್ಲಿಯೂ ಕಾಣಿಸಿಕೊಳ್ಳದ ತೇಜಸ್ವಿನಿ ಪ್ರಕಾಶ್‌ ಏನಾದರು ಎಂಬ ಸಣ್ಣ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇದೆ. ಹೌದು ನಟಿ ತೇಜಸ್ವಿನಿ ಪ್ರಕಾಶ್‌ ಅವರು ನನ್ನರಸಿ ಧಾರಾವಾಹಿಯ ನಂತರ ಬೇರೆ ಯಾವುದೇ ಧಾರೌಾಹಿಗಳಲ್ಲಿ ಅಭಹಿನಯಿಸಲಿಲ್ಲ.. ಇದಕ್ಕೆ ಕಾರಣ ಅವಕಾಶಗಳ ಕೊರತೆ ಅಲ್ಲ.. ಸಾಲು ಸಾಲು ಅವಕಾಶ ಬಂದರೂ ಸಹ ತಮ್ಮ ವ್ಯಯಕ್ತಿಕ ಜೀವನದ ಕಾರಣದಿಂದ ಬಣ್ಣದ ಲೋಕದಿಂದ ದೂರ ಉಳಿದರು..

ಹೌದು ತೇಜಸ್ವಿನಿ ಪ್ರಕಾಶ್‌ ಅವರು ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಫಣಿ ವರ್ಮ ಎಂಬುವವರ ಜೊತೆ ಅದ್ಧೂರಿಯಾಗಿ ಮದುವೆಯಾದರು.. ಇನ್ನು ಮದುವೆ ಯ ಆರತಕ್ಷತೆಯೂ ಅದ್ಧೂರಿಯಾಗಿ ನೆರವೇರಿದ್ದು ಡಿ ಬಾಸ್‌ ದರ್ಶನ್‌ ಅವರನ್ನು ಸೇರಿದಂತೆ ಸಿನಿಮಾ ಕಲಾವಿದರು ಹಾಗೂ ಕೆರುತೆರೆಯ ಸಾಕಷ್ಟು ಕಲಾವಿದರು ಭಾಗವಹಿಸಿ ತೇಜಸ್ವಿನಿ ಪ್ರಕಾಶ್‌ ಅವರಿಗೆ ಶುಭ ಕೋರಿದ್ದರು.. ಇನ್ನು ಇದೀಗ ತೇಜಸ್ವಿನಿ ಪ್ರಕಾಶ್‌ ಅವರು ಮತ್ತೊಂದು ಸಿಹಿ ಸುದ್ದಿ ನೀಡಿದ್ದು ನಿನ್ನೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.. ಅದರಲ್ಲೂ ತಮ್ಮ ಹುಟ್ಟು ಹಬ್ಬದ ದಿನವೇ ಮಗಳು ಸಹ ಜನಿಸಿದ್ದು ತೇಜಸ್ವಿನಿ ಅವರ ಬದುಕಲ್ಲಿ ಎರೆಡೆರೆಡು ಸಂಭ್ರಮ ಮನೆ ಮಾಡಿದೆ..

ಹೌದು ಕೆಲ ತಿಂಗಳ ಹಿಂದಷ್ಟೇ ಈಗಿನ ಟ್ರೆಂಡ್‌ ನಂತೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಹಾಗೂ ಬೇಬಿ ಬಂಪ್‌ ಕಾರ್ಯಕ್ರಮ ಮಾಡಿಕೊಂಡು ತಾಯಿಯಾಗುತ್ತಿರುವ ವಿಚಾರವನ್ನು ಸ್ನೇಹಿತರ ಜೊತೆ ಹಂಚಿಕೊಂಡಿದ್ದರು.. ಇನ್ನು ಇದೀಗ ತಮ್ಮ ಹುಟ್ಟು ಹಬ್ಬದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರ ತಿಳಿಸಿರುವ ತೇಜಸ್ವಿನಿ ಪ್ರಕಾಶ್‌ ಅವರು “ಹೆಣ್ಣು ಮಗು ಆಗಿದೆ.. ನಮ್ಮ ಜೀವನದ ಖುಷಿ ಇದು.. ಈ ಜನ್ಮ ದಿನಕ್ಕೆ ಮರೆಯಲಾಗದ ಉಡುಗೊರೆ” ಎಂದು ಬರೆದು ಸಂತೋಷ ಹಂಚಿಕೊಂಡಿದ್ದಾರೆ.. ಇತ್ತ ಸ್ನೇಹಿತರು ಅಭಹಿಮಾನಿಗಳು ಎಲ್ಲರೂ ಸಹ ತೇಜಸ್ವಿನಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳ ಜೊತೆಗೆ ಮಗುವಿಗೆ ಹಾರೈಸಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.