ಕಿರಾತಕ ಸಿನಿಮಾದ ಖ್ಯಾತ ನಟ ಬಾಲಾಜಿ ಇನ್ನಿಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

0 views

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.. ಹೌದು ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟನನ್ನು ಕಳೆದುಕೊಂಡು ದಕ್ಷಿಣ ಭಾರತದ ಚಿತ್ರರಂಗ ನಿಜಕ್ಕೂ ಶಾಕ್ ಆಗಿದೆ.. ಅಷ್ಟಕ್ಕೂ ಅಷ್ಟು ಚೆನ್ನಾಗಿದ್ದ ಡ್ಯಾನಿಯಲ್ ಬಾಲಾಜಿ ಅವರಿಗೆ ಏನಾಗಿತ್ತು.. ನಲವತ್ತೆಂಟು ವರ್ಷಕ್ಕೆ ಅದ್ಭುತ ನಟ ಕೊನೆಯುಸಿರೆಳೆದಿದ್ದೇಕೆ.. ಸಂಪೂರ್ಣ ಮಾಹಿತಿ ಇಲ್ಲಿದೆ..

ಡ್ಯಾನಿಯಲ್ ಬಾಲಾಜಿ ಅವರಿಗೆ ನಲವತ್ತೆಂಟು ವರ್ಷ ವಯಸ್ಸಾಗಿತ್ತು.. ಅವರು ಮೊದ ಮೊದಲು ಕಮಲ್ ಹಾಸನ್ ಅವರ ಸಿನಿಮಾದಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡು ತಮ್ಮ ಸಿನಿಮಾ ಬದುಕನ್ನು ಆರಂಭಿಸಿದರು.. ಆದರೆ ದುರಾದೃಷ್ಟವಶಾತ್ ಆ ಸಿನಿಮಾ ಬಿಡುಗಡೆಯಾಗಲಿಲ್ಲ.. ನಂತರ ತಮಿಳಿನ ಚಿಥಿ ಎಂಬ ಧಾರಾವಾಹಿಯಲ್ಲಿ ಡ್ಯಾನಿಯಲ್ ಎಂಬ ಪಾತ್ರವನ್ನು ಅಭಿನಯಿಸಿ ಮನೆ ಮಾತಾದರು.. ಆ ಬಳಿಕ ತಮ್ಮ ಹೆಸರಿನ ಜೊತೆಗೆ ಡ್ಯಾನಿಯಲ್ ಬಾಲಾಜಿ ಎಂದೇ ಸೇರಿಸಿಕೊಂಡು ಹೆಸರಾದರು.. ನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಡ್ಯಾನಿಯಲ್ ಬಾಲಾಜಿ ಸುಮಾರು ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಹತ್ತಾರು ಸೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ..

ಇನ್ನು ಕನ್ನಡ ಚಿತ್ರರಂಗಕ್ಕೆ ಕಿರಾತಕ ಸಿನಿಮಾ ಮೂಲಕ ಕಾಲಿಟ್ಟ ಡ್ಯಾನಿಯಲ್ ಬಾಲಾಜಿ ಅವರು ಇಲ್ಲಿಯೂ ಸಹ ಹೆಸರು ಮಾಡಿದರು.. ಕಿರಾತಕ ನಂತರ ಆರು ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.. ಡ್ಯಾನಿಯಲ್ ಬಾಲಾಜಿ ನಮ್ಮ ಕನ್ನಡ ಚಿತ್ರದಂಗದ ಹೆಸರಾಂತ ನಟ ಸಿದ್ದಲಿಂಗಯ್ಯ ಅವರ ಸಂಬಂಧಿಯೂ ಹೌದು.. ಇನ್ನು ಯಶ್ ಅವರಿಗೆ ಬಹಳ ಆಪ್ತರಾಗಿದ್ದ ಡ್ಯಾನಿಯಲ್ ಸಾಕಷ್ಟು ಧಾರ್ಮಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು..

ಕೆಲ ದಿನಗಳ ಹಿಂದಷ್ಟೇ ವೇದಿಕೆಯೊಂದರಲ್ಲಿ ಯಶ್ ಅವರ ಬಗ್ಗೆ ಮಾತನಾಡುತ್ತಾ ನಾನು ದೇವಸ್ಥಾನ ಕಟ್ಟುವ ಸಮಯದಲ್ಲಿ ಯಶ್ ಫೋನ್ ಮಾಡಿದ್ದರು.. ಫೋನ್ ನಲ್ಲಿ ದೇವಸ್ಥಾನ ಕಟ್ಟುವ ವಿಚಾರ ತಿಳಿಸಿ ಸಧ್ಯಕ್ಕೆ ಯಾವ ಸಿನಿಮಾದಲ್ಲಿಯೂ ಅಭಿನಯಿಸಲು ಸಾಧ್ಯವಾಗುತ್ತಿಲ್ಲ ಎಂದೆ.. ತಕ್ಷಣ ಫೋನ್ ಕಟ್ ಮಾಡಿ ದೊಡ್ಡ ಮೊತ್ತದ ಹಣವನ್ನು ಕಳುಹಿಸಿಕೊಟ್ಟಿದ್ದರು.. ಫೋನ್ ಮಾಡಿ ಕೇಳಿದ್ದಕ್ಕೆ ದೇವಸ್ಥಾನಕ್ಕೆ ದೇಣಿಗೆ ಎಂದಿದ್ದರು.. ಅದು ಅವರ ದೊಡ್ಡ ಗುಣ ಎಂದಿದ್ದರು..

ಇನ್ನು ಕೇವಲ ನಲವತ್ತೆಂಟು ವರ್ಷ ವಯಸ್ಸಿನ ಡ್ಯಾನಿಯಲ್ ಬಾಲಾಜಿ ಅವರಿಗೆ ನಿನ್ನೆ ಮಾರ್ಚ್ ಇಪ್ಪತ್ತೊಂಭತ್ತನೇ ತಾರೀಕು ಧೀಡಿರ್ ಆಗಿ ಹೃದಯಾಘಾತವಾಗಿದ್ದು‌.. ತಕ್ಷಣ ಅವರನ್ನು ಚೆನ್ನೈನ ಕೊಟ್ಟಿವಾಖಂ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡ್ಯಾನಿಯಲ್ ಕೊನೆಯುಸಿರೆಳೆದಿದ್ದು ದಕ್ಷಿಣ ಭಾರತದ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.. ಅವರ ಅಂತಿಮ ದರ್ಶನ ಪಡೆಯಲು ನಟ ಯಶ್ ಅವರು ತೆರಳಲಿದ್ದಾರೆ ಎಂದು ತಿಳಿದುಬಂದಿದೆ..