ಬಿಗ್‌ ಬಾಸ್‌ ನಿಂದ ಹೊರ ಬಂದ ಕೂಡಲೇ ಕೋಪ ಹೊರ ಹಾಕಿದ ಪವಿ ಪೂವಪ್ಪ.. 

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ನೋಡು ನೋಡುತ್ತಿದ್ದಂತೆ ಹತ್ತು ವಾರಗಳು ಮುಕ್ತಾಯಗೊಂಡಿದ್ದು ಸಂಗೀತಾ ವಿನಯ್‌ ಕಾರ್ತಿಕ್..‌ ನಮ್ರತಾ.. ತುಕಾಲಿ ಸಂತೋಷ್..‌ ವರ್ತೂರು ಸಂತೋಷ್..‌ ಸಿರಿ, ಮೈಕಲ್‌, ಡ್ರೋನ್ ಪ್ರತಾಪ್..‌ ಅವಿನಾಶ್..‌ ತನಿಷಾ ಸೇರಿದಂತೆ ಹನ್ನೊಂದು ಸ್ಪರ್ಧಿಗಳು ಯಶಸ್ವಿಯಾಗಿ ಹನ್ನೊಂದನೇ ವಾರಕ್ಕೆ ಕಾಲಿಟ್ಟಿದ್ದಾರೆ.. ಇನ್ನು ಕಳೆದ ವಾರ ಎಲಿಮಿನೇಷನ್‌ ನಲ್ಲಿ ಹೊರ ಬಂದ ಪವಿ ಪೂವಪ್ಪ ಅಸಮಾಧಾನವನ್ನು ಹೊರ ಹಾಕಿದ್ದಾರೆ.. ಅಷ್ಟೇ ಅಲ್ಲದೇ ಮತ್ತೊಬ್ಬ ಸ್ಪರ್ಧಿಯ ಮೇಲಿನ ಕೋಪಕ್ಕೆ ನಾನು ಬಲಿಯಾದೆ ಎಂದಿದ್ದು ಇಬ್ಬರ ಮೇಲೆ ಕೋಪದಿಂದಲೇ ಮಾತನಾಡಿದ್ದಾರೆ..

ಹೌದು ಪವಿ ಪೂವಪ್ಪ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ ಬಾಸ್‌ ಮನೆಗೆ ಹೋದವರು.. ಐವತ್ತು ದಿನಗಳ ನಂತರ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದ ಪವಿ ಪೂವಪ್ಪಗೆ ಹಿಂದೆಂದೂ ಯಾವ ಸ್ಪರ್ಧಿಗಳಿಗೂ ಸಿಗದ ಅದ್ಧೂರಿ ಎಂಟ್ರಿ ದೊರೆತಿತ್ತು.. ಐವತ್ತು ದಿನಗಳ ಕಾಲ ಬಿಗ್‌ ಬಾಸ್‌ ಮನೆಯು ಆಟವನ್ನು ಟಿವಿಯಲ್ಲಿ ವೀಕ್ಷಿಸಿದ್ದ ಪವಿ ಪೂವಪ್ಪ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬಿಗ್‌ ಬಾಸ್‌ ಮನೆಯೊಳಗೆ ಇರುವ ಸ್ಪರ್ಧಿಗಳನ್ನು ಆಟ ಆಡಿಸಬಹುದು ಹಾಗೂ ಪವಿ ಪೂವಪ್ಪರಿಂದ ಹೊಸ ಹುರುಪು ಬಿಗ್‌ ಬಾಸ್‌ ಮನೆಗೆ ಬರಬಹುದು ಎಂದೆಲ್ಲಾ ಅಂದಾಜಿಸಲಾಗಿತ್ತು.. ಆದರೆ ಎಲ್ಲಾ ನಿರೀಕ್ಷೆಗಳೂ ಸುಳ್ಳಾದವು..

ಅತ್ತ ಮೊದಲ ವಾರವೇ ಬಿಗ್‌ ಬಾಸ್‌ ಮನೆಯ ಮೂಲ ನಿಯಮ ಮುರಿದ ಪವಿ ಪೂವಪ್ಪ ಹೊರಗೆ ವಿನಯ್‌ ಪತ್ನಿ ಗೆ ತೊಂದರೆಯಾಗಿದೆ ಎಂದು ಅವರ ವಿಚಾರವನ್ನು ವಿನಯ್‌ ಅವರಿಗೆ ತಿಳಿಸಿ ಕೆಲ ದಿನಗಳು ವಿನಯ್‌ ವರ್ತನೆಯೇ ಬದಲಾಗುವಂತೆ ಮಾಡಿದ್ದರು.. ಇನ್ನು ಟಾಸ್ಕ್‌ ಗಳಲ್ಲಿ ತೊಡಗಿಕೊಂಡರೂ ಹೆಚ್ಚಾಗಿ ಯಾವುದರಲ್ಲಿಯೂ ಹೈಲೈಟ್‌ ಆಗದೇ ಕೊನೆಗೆ ವಿನಯಗ ಗುಂಪಿಗೆ ಸೇರಿಕೊಂಡು ಎಲ್ಲರೊಳಗೊಂದಾದರು.. ಇದರ ಪರಿಣಾಮ ಪವಿ ಪೂವಪ್ಪ ಮೂರೇ ದಿನಕ್ಕೆ ಬಿಗ್‌ ಬಾಸ್‌ ಮನೆಯಿಂದ ಹೊರ ಬರುವಂತಾಯಿತು.. ಇನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಪವಿ ಪೂವಪ್ಪ ಬಿಗ್‌ ಬಾಸ್‌ ಮನೆಯೊಳಗಿನ ಒಂದಷ್ಟು ವಿಚಾರಗಳನ್ನು ತಿಳಿಸಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..

ಹೌದು ನಾನು ವಿನಯ್‌ ಬಹಳ ಕ್ಲೋಸ್‌ ಆಗಿದ್ದೆವು.. ಆದರೆ ವಿನಯ್‌ ಮೇಲಿನ ಕೋಪಕ್ಕೆ ನಾನು ಬಲಿಯಾದೆ.. ಅವನ ಜೊತೆ ಕ್ಲೋಸ್‌ ಆಗಿದ್ದೇ ಆ ಮನೆಯಲ್ಲಿ ತಪ್ಪಾಯಿತು.. ಅದನ್ನು ಸಹಿಸಲು ಸಂಗೀತಾಗೆ ಹಾಗೂ ಕಾರ್ತಿಕ್‌ ಗೆ ಆಗಲಿಲ್ಲ.. ವಿನಯ್‌ ಮೇಲಿನ ಕೋಪಕ್ಕೆ ನನ್ನನ್ನು ಟಾರ್ಗೆಟ್‌ ಮಾಡಿದ್ರು.. ಟಾಸ್ಕ್‌ ಗಳಲ್ಲಿ ಮಾತ್ರಬವಲ್ಲಿ ನಾಮಿನೇಟ್‌ ಮಾಡುವ ಸಮಯದಲ್ಲಿ ಹಾಗೂ ಎಲಿಮಿನೇಷನ್‌ ಟಾಸ್ಕ್‌ ಗಳಲ್ಲಿ ನನ್ನನ್ನು ಟಾರ್ಗೆಟ್‌ ಮಾಡಿ ಬಿಗ್‌ ಬಾಸ್‌ ನಿಂದ ಹೊರಗೆ ಕಳುಹಿಸಲು ಸಾಕಷ್ಟು ಪ್ರಯತ್ನ ಮಾಡಿದರು.. ಅವನ ಮೇಲಿನ ಕೋಪವನ್ನು ನನ್ನ ಮೂಲಕ ತೀರಿಸಿಕೊಂಡರು.. ಒಟ್ಟಿನಲ್ಲಿ ಅವನ ಮೇಲಿನ ಕೋಪಕ್ಕೆ ನಾನು ಬಲಿಯಾದೆ ಎಂದಿದ್ದಾರೆ..

ಇನ್ನು ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಮತ್ತೊಬ್ಬ ಸ್ಪರ್ಧಿ ಅವಿನಾಶ್‌ ಕೂಡ ನಿರೀಕ್ಷೆ ಮಾಡಿದಷ್ಟು ಯಾವುದೇ ರೀತಿಯ ಕಂಟೆಂಟ್‌ ನೀಡದ ಕಾರಣ ಈ ವಾರ ಬಿಗ್‌ ಬಾಸ್‌ ಮನೆಯಿಂದ ಅವಿನಾಶ್‌ ಕೂಡ ಹೊರ ಬಂದರೆ ಯಾವುದೇ ರೀತಿಯ ಆಶ್ಚರ್ಯ ಪಡಬೇಕಿಲ್ಲ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.