ಬೆಂಗಳೂರಿನಲ್ಲಿ ಹೆತ್ತ ತಂದೆಯ ಕಣ್ಣು ಕಿತ್ತು ಮಗ ಮಾಡಿರುವ ಕೆಲಸ ನೋಡಿ.. ಇವನ ಜನ್ಮಕ್ಕಿಷ್ಟು..

0 views

ತಂದೆ ತಾಯಿ ಕಣ್ಣಿಗೆ ಕಾಣುವ ದೆವರು ಎನ್ನುವ ಮಾತಿದೆ.. ಅದೇ ರೀತಿ ಹೆತ್ತವರು ತಮ್ಮ ಸರ್ವಸ್ವವನ್ನೇ ಮಕ್ಕಳಿಗಾಗಿ ಮುಡಿಪಾಗಿ ಇಟ್ಟಿರುತ್ತಾರೆ.‌ ಹುಟ್ಟಿದಾಗಿನಿಂದ ಅವರನ್ನು ಸಾಕಿ ಸಲುಹಿ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ಅವರನ್ನೊಂದು ನೆಲೆ ಮುಟ್ಟಿಸಲು ಹಗಲು ರಾತ್ರಿ ಎನ್ನದೇ ದುಡಿದು ತಮ್ಮ ಸಂಪೂರ್ಣ ಜೀವನವನ್ನೇ ತ್ಯಾಗ ಮಾಡಿರುತ್ತಾರೆ.‌. ಇದರ ಹೊರತಾಗಿಯೂ ಸಾಕಷ್ಟು ಜನರಿಗೆ ಒಳ್ಳೆಯ ಅಪ್ಪ ಅಮ್ಮ ಸಿಗದೇ ಇರೋದು ಉಂಟು.. ಅಂತಹ ಸಾಕಷ್ಟು ಮಕ್ಕಳು ಜೀವನದಲ್ಲಿ ಬೇರೆ ದಾರಿ ಹಿಡಿದು ಹಾಳಾಗಿರುವುದೂ ಉಂಟು.. ಇನ್ನು ಕೆಲ ಮಕ್ಕಳು ಅದನ್ನೇ ಪಾಠವಾಗಿ ತೆಗೆದುಕೊಂಡು ಜೀವನದಲ್ಲಿ ಸಾಧನೆ ಮಾಡಿರೋದು ಉಂಟು.. ಇನ್ನು ಹೆತ್ತವರು ಮಾಡಿರುವ ಆಸ್ತಿಗಾಗಿ ಜಗಳ ಹೊಸದೇನಲ್ಲ.. ಅಪ್ಪ ಅಮ್ಮನ ಆಸ್ತಿಗಾಗಿ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಆಗಾಗ ಕಿತ್ತಾಟ ನಡೆಸುವುದು ಕೋರ್ಟ್ ಕಚೇರಿ ಮೆಟ್ಟಿಲೇರುವುದನ್ನು ನಾವು ನೋಡಿಯೇ ಇರುತ್ತೇವೆ.. ಹಾಗೆಯೇ ಅಪ್ಪ ಮಕ್ಕಳ ನಡುವೆಯೂ ಆಸ್ತಿಗಾಗಿ ಕಾದಾಟಗಳು ಸರ್ವೇ ಸಾಮಾನ್ಯ‌‌.. ಆದರೆ ಬೆಂಗಳೂರಿನಲ್ಲೊಬ್ಬ ಪುತ್ರ ಮಹಾಶಯ ಆಸ್ತಿಗಾಗಿ ತನ್ನ ತಂದೆಯ ಕಣ್ಣನ್ನೇ ಕಿತ್ತಿದ್ದು ನಿಜಕ್ಕೂ ಆತನ ಬಗ್ಗೆ ಅಸಹ್ಯ ಮೂಡುವಂತೆ ಮಾಡಿದೆ.. ಆದರೀಗ ಆತನಿಗೆ ಸರಿಯಾದ ಶಿಕ್ಷೆಯೂ ದೊರೆತಿದೆ..

ಹೌದು ತನ್ನ ಹೆಸರಿಗೆ ಆಸ್ತಿ ಬರೆಯುವಂತೆ ಸದಾ ತಂದೆ ಜತೆ ಜಗಳವಾಡುತ್ತಿದ್ದ ಮಗ, ಕೊನೆಗೆ ಅವರ ಕಣ್ಣನ್ನೇ ಕಿತ್ತು ಹಾಕಿ ಪರಾರಿಯಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.. ಕೊನೆಗೆ ಪೋಲೀಸರ ಕೈಗೆ ಸಿಕ್ಕು ಬಿದ್ದಿದ್ದು ಬಂಧಿತನಾಗಿ ಜಾಮೀನು ಪಡೆದು ಮತ್ತೆ ಪರಾರಿಯಾಗಿದ್ದ.. ಆದರೀಗ ಆತನಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವೊಂದು 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.. ಆಸ್ತಿ ಸಲುವಾಗಿ ತಂದೆಯ ಕಣ್ಣು ಕಿತ್ತು ಕೊಲೆಗೆ ಯತ್ನಿಸಿದ್ದ ಬೆಂಗಳೂರಿನ ನಲವತ್ತೇಳು ವರ್ಷದ ಅಭಿಷೇಕ್‌ ಚೇತನ್‌ ಎಂಬಾತನಿಗೆ ಬರೋಬ್ಬರಿ ಒಂಭತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ನಗರದ 57ನೇ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ..

ಬನಶಂಕರಿಯ ಶಾಕಾಂಬರಿ ನಗರದ ಅಭಿಷೇಕ್‌ ಚೇತನ್‌ ಎಂಬಾತ ಕಳೆದ ಐದು ವರ್ಷದ ಹಿಂದೆ, 2018ರಲ್ಲಿ ಆಗಸ್ಟ್‌ 28ರಂದು ತನ್ನ ತಂದೆ ಎಸ್‌.ಎಸ್‌. ಪರಮೇಶ್‌ ಅವರ ಕಣ್ಣನ್ನು ಕಿತ್ತು ಅವರನ್ನು ಇಲ್ಲವಾಗಿಸಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ಅಭಿಷೇಕ್‌ನನ್ನು ಬಂಧಿಸಿದ್ದ ಬನಶಂಕರಿ ಠಾಣೆ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.. ಪ್ರಕರಣದ ವಿಚಾರಣೆ ನಡೆಸಿದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಟಿ.ಗೋವಿಂದಯ್ಯ, ಅಪರಾಧಿ ಅಭಿಷೇಕ್‌ಗೆ 9 ವರ್ಷ ಜೈಲು , 42 ಸಾವಿರ ರೂ. ದಂಡ ವಿಧಿಸಿದೆ. ಪ್ರಾಸಿಕ್ಯೂಶನ್‌ ಪರವಾಗಿ ಸರಕಾರಿ ಅಭಿಯೋಜಕಿ ಕೆ.ಎಸ್‌. ವೀಣಾ ವಾದಿಸಿದ್ದರು. ಅಭಿಷೇಕ್‌ ಚೇತನ್ ತನ್ನ ಹೆಸರಿಗೆ ಆಸ್ತಿ ವರ್ಗಾಯಿಸುವಂತೆ ತಂದೆ ಪರಮೇಶ್‌ ಅವರಿಗೆ ಆಗಾಗ ಪೀಡಿಸುತ್ತಲೇ ಇದ್ದ.. ಮಗನ ನಡವಳಿಕೆ ಕಂಡಿದ್ದ ತಂದೆ ಮಗನಿಗೆ ಆಸ್ತಿ ಬರೆಯಲು ನಿರಾಕರಿಸಿದ್ದರು.. ಇತ್ತ ಆಸ್ತಿ ವರ್ಗಾಯಿಸಲು ಒಪ್ಪದ ಪರಮೇಶ್‌ ಅವರ ಮೇಲೆ ಕೈ ಮಾಡಿದ್ದ ಅಭಿಷೇಕ್‌ ಚೇತನ್‌ ತಂದೆಯ ಕಣ್ಣು ಕಿತ್ತು ಪರಾರಿಯಾಗಿದ್ದ.

ತೀವ್ರ ರಕ್ತ ಸ್ರಾವದಿಂದ ಪರಮೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಒಮ್ಮೆ ಜೈಲು ಸೇರಿ ಜಾಮೀನಿನ ಮೇರೆಗೆ ಹೊರಗಡೆ ಬಂದಿದ್ದ ಅಭಿಷೇಕ್, ಕೇಸ್‌ ವಿಚಾರಣಾ ಪ್ರಕ್ರಿಯೆಗಳಿಗೂ ಹಾಜರಾಗದೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ, ಇತ್ತೀಚೆಗೆ ಆತನನ್ನು ಮತ್ತೆ ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.. ಈಗ ಆಸ್ತಿ ಕೇಳಿದ ಮಗನಿಗೆ ಒಂಭತ್ತು ವರ್ಷ ಜೈಲು ವಾಸ ಅನುಭವಿಸಬೇಕಾಗಿದ್ದು ಮಾಡಿದುಣ್ಣೋ ಮಹರಾಯ ಎನ್ನುವಂತಾಗಿದೆ.. ದುಡಿದು ತಿನ್ನಲು ರೋಗ ಇರುವ ಇಂತಹ ಜನರು ಆಸ್ತಿಗಾಗಿ ಏನು ಮಾಡಲು ಸಹ ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ಅಭಿಷೇಕ್‌ ಘಟನೆಯೇ ಸಾಕ್ಷಿ ಎನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.