ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಗೆ ಶಾಕ್.. ದೂರು ಕೊಟ್ಟ ಆ ಮಹಿಳೆ ಯಾರು ಗೊತ್ತಾ.. ಅಸಲಿ ಕತೆ ಬೇರೆಯೇ ಇದೆ..

0 views

ಡಿ ಬಾಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಯಾಕೋ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಇದೆ.. ಮೊನ್ನೆ ಮೊನ್ನೆಯಷ್ಟೇ ಹುಲಿ ಉಗುರಿನ ವಿಚಾರವಾಗಿ ಒಂದಷ್ಟು ಸದ್ದು ಮಾಡಿದ್ದ ಡಿ ಬಾಸ್ ಮೇಲೆ ಇದೀಗ ಮತ್ತೊಬ್ಬ ಮಹಿಳೆ ದೂರು ದಾಖಲಿಸಿದ್ದು ಎಫ್ ಐ ಆರ್ ಕೂಡ ದಾಖಲಾಗಿದೆಯಂತೆ..ಹೌದು ಬಿಗ್ ಬಾಸ್ ಮನೆಯ ಸಂತೋಷ್ ಅದ್ಯಾವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಶೋ ನಲ್ಲಿ ಕಾಣಿಸಿಕೊಂಡರೋ ಅಲ್ಲಿಂದ ಆರಂಭವಾದ ಹುಲಿ ಉಗುರಿನ ಕತೆ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಬಿಡಲಿಲ್ಲ.. ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರು ನಟಿ ಅಮೂಲ್ಯ ಅವರ ಮಕ್ಕಳು ಹೀಗೆ ಸಾಕಷ್ಟು ಸೆಲಿಬ್ರೆಟಿಗಳ ಬೆನ್ನು ಹತ್ತಿದ ಆ ಹುಲಿ ಉಗುರು ರಾಜಕಾರಣಿಗಳ ಮಕ್ಕಳು ಅದರಲ್ಲೂ ಸಚಿವೆಯ ಪುತ್ರನನ್ನೂ ಸಹ ಕಾಡಿತು.. ಇನ್ನು ಅದರಲ್ಲಿ ಒಂದಷ್ಟು ಆರ್ಟಿಫಿಶಿಯಲ್ ಹುಲಿ ಉಗುರೆಂದು ತಿಳಿದು ಬಂದರೆ ಜಗ್ಗೇಶ್ ಅವರು ತಮ್ಮ ತಾಯಿ ನೀಡಿದ್ದ ಅಸಲಿ ಹುಲಿ ಉಗುರನ್ನು ಅರಣ್ಯ ಇಲಾಖೆಗೆ ಒಪ್ಪಿಸಿದರು..

ಇನ್ನು ಈ ಬಗ್ಗೆ ಪ್ರಮುಖವಾಗಿ ಹೆಸರು ಕೇಳಿ ಬಂದಿದ್ದು ದರ್ಶನ್ ಅವರದ್ದು.. ಹೌದು ಡಿ ಬಾಸ್ ಅವರ ವಿಚಾರ ಎಂದರೆ ಸಾಮಾನ್ಯವಾಗಿ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗೋದು ಸಹಜ.. ಕಳೆದ ಕೆಲ ವರ್ಷ ಎಲೆಕ್ಟ್ರಾನಿಕ್ ಮೀಡಿಯಾಗಳು ದರ್ಶನ್ ಅವರನ್ನು ಬ್ಯಾನ್ ಮಾಡಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸುದ್ದಿಯಾಗುತ್ತಲೇ ಇತ್ತು.. ಇನ್ನು ಈಗ ರಾಜಿ ಸಂದಾನವಾದ ಬಳಿಕ ದರ್ಶನ್ ಅವರ ವಿಚಾರಗಳೇ ರಾಜ್ಯದಲ್ಲಿ ಪ್ರಮುಖ ಸುದ್ದಿಗಳು.. ಅವರ ವಿಚಾರ ಬಿಟ್ಟರೆ ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವಷ್ಟು ದರ್ಶನ್ ಅವರ ವಿಚಾರಗಳು ಸುದ್ದಿಯಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ..

ಇನ್ನು ಈಗ ಮಹಿಳೆಯ ಕೇಸ್ ವಿಚಾರಕ್ಕೆ ಬರುವುದಾದರೆ ಈ ಹುಲಿ ಉಗುರಿನ ವಿಚಾರ ತಣ್ಣಗಾಗುತ್ತಿರುವ ಸಮಯದಲ್ಲೇ ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು ಮಹಿಳೆಯೊಬ್ಬರು ದರ್ಶನ್ ಅವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ ಐ ಆರ್ ಕೂಡ ದಾಖಲಾಗಿದೆ.. ಇನ್ನು ಈ ವಿಚಾರ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲ ಊಹಾಪೋಹಗಳು ಹಬ್ಬುತ್ತಿರುವುದೂ ಉಂಟು.. ಆದರೆ ಅಸಲಿಗೆ ಅಲ್ಲಿನ ಸತ್ಯ ಬೇರೆಯೇ ಇದೆ.. ಹೌದು ಮಹಿಳೆಯೊಬ್ಬರು ದರ್ಶನ್ ಅವರ ವಿರುದ್ಧ ದೂರು ನೀಡಿರೋದು ನಿಜ.. ದರ್ಶನ್ ಅವರು ಮಾತ್ರವಲ್ಲ ಅವರ ಮನೆಯಲ್ಲಿ ಕೆಲಸ ಮಾಡುವವನ ಮೇಲೆಯೂ ದೂರು ದಾಖಲಾಗಿದೆ.. ಆ ಮಹಿಳೆಯ ಹೆಸರು ಅಮಿತ್ ಜಿಂದಾಲ್.. ಅಸಲಿಗೆ ಅಲ್ಲಿ ನಡೆದಿರೋ ವಿಚಾರ ಏನು ಎಂದರೆ ಅಮಿತ್ ಜಿಂದಾಲ್ ಅವರು ಅಕ್ಟೋಬರ್ 28ರಂದು ಅಂದರೆ ಮೊನ್ನೆ ಸ್ಪರ್ಶ ಆಸ್ಪತ್ರೆಯಲ್ಲಿ ವಿಶ್ವಪಾರ್ಶ್ವವಾಯು ದಿನ ಪ್ರಯುಕ್ತ ಜಾಗೃತಿ ಕಾರ್ಯಕ್ರಮವಿದ್ದು.. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಜಿಂದಾಲ್ ಅವರು ಆಸ್ಪತ್ರೆಯ ಬಳಿ ಹೋಗಿದ್ದರಂತೆ.. ಇದೇ ಸಮಯದಲ್ಲಿ ಅಮಿತ್ ಜಿಂದಾಲ್ ತಮ್ಮ ಕಾರನ್ನು ದರ್ಶನ್‌ರವರ ಮನೆಯ ಪಕ್ಕದ ಖಾಲಿ ಜಾಗದ ಮುಂದಿನ ರಸ್ತೆಯಲಿ ನಿಲ್ಲಿಸಿದ್ದರಂತೆ.. ಕಾರ್ಯಕ್ರಮ ಮುಗಿದ ನಂತರ ವಾಪಸ್ಸು ಹೋಗಲು ಕಾರಿನ ಬಳಿ ಬಂದಾಗ ಅಮಿತ್ ಜಿಂದಾಲ್ ಅವರು ಕಾರು ನಿಲ್ಲಿಸಿದ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು ಅದರಲ್ಲಿ ಎರಡು ನಾಯಿಗಳನ್ನು ಕಟ್ಟಿ ಹಾಕಿದ್ದು ಒಂದು ನಾಯಿಯನ್ನು ಹಾಗೆಯೇ ಬಿಟ್ಟಿದ್ದರಂತೆ.. ಕೆಳಗಿನ ವೀಡಿಯೋ ನೋಡಿ..

ಆ ನಾಯಿಗಳ ಜೊತೆ ಅವುಗಳನ್ನು ನೋಡಿಕೊಳ್ಳುವ ದರ್ಶನ್ ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯು ಅಲ್ಲಿಯೇ ಕುಳಿತಿದ್ದನಂತೆ. ಆತನಿಗೆ ಅಮಿತ್ ಜಿಂದಾಲ್ ನಾನು ಕಾರನ್ನು ತೆಗೆದುಕೊಳ್ಳಬೇಕು, ನಾಯಿಗಳನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದರಂತೆ… ಆದರೆ ಆ ವ್ಯಕ್ತಿ ಮಹಿಳೆ ಜೊತೆ ಕಾರಿನ ಪಾರ್ಕಿಂಗ್ ವಿಚಾರವಾಗಿ ವಾಗ್ವಾದ ನಡೆಸಿದ್ದಾನಂತೆ.. ಆತನ ಜೊತೆ ಇನ್ನೊಬ್ಬ ವ್ಯಕ್ತಿಯು ಬಂದು ಪಾರ್ಕಿಂಗ್ ವಿಚಾರವಾಗಿ ಮಾತಿಗೆ ಮಾತು ನಡೆಸಿದ್ದಾರೆ.. ಈ ರೀತಿ ಮಾತಿಗೆ ಮಾತು ನಡೆಯುವ ಸಮಯದಲ್ಲಿಯೇ ನಾಯಿಯೊಂದು ಈ ಅಮಿತ್ ಜಿಂದಾಲ್ ಅವರ ಮೇಲೆ ಎಗರಿದ್ದು, ಇದರಿಂದಾಗಿ ಅಮಿತ್ ಜಿಂದಾಲ್ ನೆಲದ ಮೇಲೆ ಬಿದ್ದರಂತೆ.. ಅದೇ ಸಮಯದಲ್ಲಿ ಕಟ್ಟಿ ಹಾಕಿದ್ದ ಮತ್ತೊಂದು ನಾಯಿಯೂ ಸಹ ಎಗರಿ ಬಂದಿದೆಯಂತೆ.. ನಾಯಿಗಳು ಕಚ್ಚುತ್ತವೆ ಎಂದು ತಿಳಿದರೂ ಕೂಡ ಅದನ್ನು ನೋಡಿಕೊಳ್ಳುತ್ತಿದ್ದ ಹುಡುಗರು ಸುಮ್ಮನೇ ಇದ್ದು.. ನಾಯಿಗಳು ಅಮಿತ್ ಜಿಂದಾಲ್ ಮೇಲೆ ಎಗರಿ ಹೊಟ್ಟೆ ಭಾಗಕ್ಕೆ ಕಚ್ವಿದ್ದು ಬಟ್ಟೆಯನ್ನೂ ಸಹ ಹರಿದು ಹಾಕಿವೆಯಂತೆ.. ಇದೇ ವಿಚಾರವಾಗಿ ಅಮಿತ್ ಜಿಂದಾಲ್ ರಾಜರಾಜೆಶ್ವರಿ ನಗರದ ಪೋಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಮನೆಯ ಕೆಲಸದ ಹುಡುಗನ ಮೇಲೆ ದೂರು ದಾಖಲಿಸಿದ್ದು ಈಗ ಸುದ್ದಿಯಾಗಿದೆ.. ಇದಿಷ್ಟು ಅಮಿತ್ ಜಿಂದಾಲ್ ನೀಡಿರುವ ಹೇಳಿಕೆಯಾಗಿದ್ದು ಅತ್ತ ದರ್ಶನ್ ಅವರ ಹುಡುಗ ನಡೆದ ವಿಚಾರ ಏನು ಎಂಬುದನ್ನು ತಿಳಿಸಬೇಕಿದೆ..ಕೆಳಗಿನ ವೀಡಿಯೋ ನೋಡಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.