ಕನ್ನಡದ ಖ್ಯಾತ ನಟಿ ರೇಖಾ ಪರಿಸ್ಥಿತಿ ಏನಾಯ್ತು ನೋಡಿ.. ದೇವರ ಮೇಲೆ ಭಾರ ಹಾಕಬೇಕಷ್ಟೇ..

0 views

ಕನ್ನಡದ ಅನೇಕ ಕಲಾವಿದರು ಅದರಲ್ಲೂ ಹದಿನೈದು ಇಪ್ಪತ್ತು ವರ್ಷದ ಹಿಂದೆ ಕನ್ನಡದ ಸಿನಿಮಾರಂಗದಲ್ಲಿ ಮಿಂಚಿದ ಅನೇಕ ಕಲಾವಿದರುಗಳು ತೆರೆಯಿಂದ ಮರೆಯಾಗಿ ಹೋಗಿದ್ದಾರೆ.. ಒಂದಷ್ಟು ಮಂದಿ ಮದುವೆಯಾಗಿ ಕುಟುಂಬದ ಜೀವನದಲ್ಲಿ ಬ್ಯುಸಿ ಅದರೆ ಮತ್ತೆ ಕೆಲವರು ಇತ್ತ ಸಿನಿಮಾಗಳಲ್ಲಿ ಅವಕಾಶಗಳಿಲ್ಲದೇ ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡಿಕೊಂಡಿರೋದು ಉಂಟು..

ಇನ್ನು ಕನ್ನಡದ ಕಲಾವಿದರು ಅನೇಕರು ಅದರಲ್ಲೂ ಹಿರಿಯ ಕಲಾವಿದರುಗಳು ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದವರು ಒಂದಷ್ಟು ವರ್ಷಗಳಾದ ನಂತರ ಅವಕಾಶಗಳಿಲ್ಲದೇ ತೆರೆ ಮರೆಗೆ ಸರಿದಿದ್ದರು.. ಆದರೆ ಇತ್ತೀಚಿಗೆ ಕಿರುತೆರೆಗೆ ಅಂತಹ ಒಂದಷ್ಟು ಕಲಾವಿದರು ಕಂ ಬ್ಯಾಕ್ ಮಾಡಿದ್ದು ಒಳ್ಳೆಯ ವಿಚಾರ.. ಅದರಲ್ಲೂ ಅಭಿಜಿತ್ ಅವರು, ಬಾಲರಾಜ್ ಅವರು.. ನಟ ಅನಿರುದ್ಧ್ ಅವರು‌ ಸುಧಾರಾಣಿ ಅವರು ಶೃತಿ ಅವರು ಹಾಗೆಯೇ ನಟಿ ಉಮಾಶ್ರೀ ಅವರನ್ನೂ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಸ್ಟಾರ್ ಗಳು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರೋದುಂಟು..

ಇನ್ನು ಇತ್ತೀಚೆಗೆ ನಟಿ ಮಹಾಲಕ್ಷ್ಮಿ ಅವರೂ ಸಹ ಸ್ಟಾರ್ ಸುವರ್ಣ ವಾಹಿನಿಯ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿ ಮೂಲಕ ಕನ್ನಡ ಬಣ್ಣದ ಲೋಕಕ್ಕೆ ಕಂ ಬ್ಯಾಕ್ ಮಾಡಿರೋದು ಕಿರುತೆರೆ ಪ್ರಿಯರಿಗೆ ಒಳ್ಳೆಯ ಸುದ್ದಿ ಎನ್ನಬಹುದು.. ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಸ್ವಾಭಿಮಾನ.. ಶಶಿ ಕುಮಾರ್ ಅವರ ಜೊತೆ ಬಾರೆ ನನ್ನ ಮುದ್ದಿನ ರಾಣಿ ಹೀಗೆ ಇನ್ನೂ ಹತ್ತಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಮಹಾಲಕ್ಷ್ಮಿ ಅವರೀಗ ಗುರುತೇ ಸಿಗದಷ್ಟು ಬದಲಾಗಿದ್ದು ಸ್ಟಾರ್ ಸುವರ್ಣ ವಾಹಿನಿಯ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ನಾಯಕನ ಅಜ್ಜಿ ಪಾತ್ರದ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ..

ಇನ್ನು‌ ರೇಖಾ ಅವರ ವಿಚಾರಕ್ಕೆ ಬರೋದಾದ್ರೆ ರೇಖಾ ಅವರೂ ಸಹ ಒಂದು ಕಾಲದಲ್ಲಿ ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು.. ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದವರು.. ಆದರೆ ಒಂದಷ್ಟು ವರ್ಷಗಳ ಬಳಿಕ ಚಿತ್ರರಂಗದಿಂದ ಮರೆಯಾಗಿದ್ದ ನಟಿ ರೇಖಾ ಇದೀಗ ಪ್ರತ್ಯಕ್ಷವಾಗಿದ್ದು ಗುರುತೇ ಸಿಗದಷ್ಟು ಬದಲಾಗಿದ್ದಾರೆ.. ಅಷ್ಟಕ್ಕೂ ರೇಖಾ ಅವರನ್ನು ನೋಡಿದ ಅಭಿಮಾನಿಗಳು ಅವರ ಜೀವನದಲ್ಲಿ ಈ ರೀತಿ ಆಗಬಾರದಿತ್ತು ಎಂದು ಮರುಗಿದ್ದಾರೆ.

ಹೌದು ನಟಿ ರೇಖಾ ಅವರು ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಮಾಡಿಕೊಂಡಿದ್ದವರು.. ಆ ಕಾರಣದಿಂದ ಸುಲಭವಾಗಿ ಅತಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟರು.. ಚಿತ್ರ, ಚೆಲ್ಲಾಟ, ತುಂಟಾಟ.. ಮೊನಾಲಿಸಾ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದರು.. ನಂತರ ಒಂದಷ್ಟು ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಡುಗಾಟ ಸಿನಿಮಾ ಮೂಲಕ ಕಂಬ್ಯಾಕ್ ಕೂಡ ಮಾಡಿದ್ದರು.. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಚಿತ್ರಗಳಲ್ಲಿಯೂ ತೊಡಗಿಕೊಂಡಿದ್ದ ನಟಿ ರೇಖಾ ಅವರು ಅಲ್ಲಿಯೂ ಸಾಕಷ್ಟು ಸೂಪರ್ ಹಿಟ್ ಸಿನಿಮಗಳನ್ನು ನೀಡಿದ್ದರು.. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ಹುಚ್ಚ ಸಿನಿಮಾ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು.. ದಿನಗಳು ಕಳೆದಂತೆ ಸಿಕ್ಕಾಪಟ್ಟೆ ದಪ್ಪ ಆಗಿದ್ದ ನಟಿ ರೇಖಾ ಅವರು ಮತ್ತೆ ತೂಕ ಇಳಿಸಿಕೊಂಡು ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು.. 2014 ರಲ್ಲಿ ತುಳಸಿ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದ ರೇಖಾ ಅವರು ಅದೇ ಅವರ ಕೊನೆಯ ಚಿತ್ರವಾಗಿತ್ತು.. ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಆದರೆ ಈಗ ಇದ್ದಕ್ಕಿದ್ದ ಹಾಗೆ ಒಂಭತ್ತು ವರ್ಷಗಳ ಬಳಿಕ ತೆಲುಗಿನ ಕಿರುತೆರೆ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದು ರೇಖಾ ಅವರು ಇರುವ ಪರಿಸ್ಥಿತಿ ನೋಡಿ ಜನರು ಶಾಕ್ ಆಗಿದ್ದಾರೆ..

ಹೌದು ನಟಿ ರೇಖಾ ಅವರು ಗುರುತೇ ಸಿಗದಷ್ಟು ಬದಲಾಗಿದ್ದು ಕಾಯಿಲೆಯಿಂದ ಬಳಲುತ್ತಿದ್ದಾರೆ.. ತಮ್ಮ ಆರೋಗ್ಯದ ವಿಚಾರವಾಗಿ ಭಗವಂತನ ಮೇಲೆ ಭಾರ ಹಾಕಿರುವ ರೇಖಾ ಅವರು ಸ್ವತಃ ತಾವೇ ತಮ್ಮ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ..

ಹೌದು ತೆಲುಗಿನ ಶ್ರೀದೇವಿ ಡ್ರಾಮಾ ಕಂಪನಿ ಎನ್ನುವ ಕಾರ್ಯಕ್ರಮಕ್ಕೆ ಆಗಮಿಸಿರುವ ರೇಖ ಆವರು ತಮ್ಮ ವಿಚಾರದ ಬಗ್ಗೆ ಮಾತನಾಡಿದ್ದಾರೆ.. “ನಾನು ಕಾಯಿಲೆಯಿಂದ ಬಳಲುತ್ತಿದ್ದೇನೆ.. ನನಗೆ ಆರೋಗ್ಯ ಸಮಸ್ಯೆ ಇದೆ.. ಆ ಕಾರಣದಿಂದಲೇ ನಾನು ಹೀಗಾಗಿದ್ದೇನೆ.. ಇದೆಲ್ಲವೂ ಬಹಳ ಅಚಾನಕ್ ಆಗಿ ಆಗಿ ಹೋಯಿತು.. ಆದರೆ ನಾನು ನಿಮಗೆಲ್ಲಾ ಒಂದು ವಿಚಾರವನ್ನು ಹೇಳಲು ಇಷ್ಟ ಪಡುತ್ತೇನೆ.. ಬಹಳಷ್ಟು ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.. ಸಣ್ಣ ತಲೆನೋವಾದರೂ ಆಗಿರಬಹುದು.. ಅಥವಾ ದೊಡ್ಡ ಆರೋಗ್ಯ ಸಮಸ್ಯೆಯೇ ಆಗಿರಬಹುದು.. ಯಾವುದೇ ಆದರೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು.. ಒತ್ತಡ ತೆಗೆದುಕೊಂಡರೆ ನಮಗಿರುವ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.. ಬದಲಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.. ಇದೆಲ್ಲದಕ್ಕಿಂತ ದೆವರಲ್ಲಿ ಹೆಚ್ಚು ನಂಬಿಕೆ ಇಡಬೇಕು.. ಯಾವುದೇ ದೇವರಾಗಲಿ.. ದೇವರಿಗಿಂತ ಹೆಚ್ಚು ಬೇರೇನೂ ಇಲ್ಲ.. ಒಮ್ಮೊಮ್ಮೆ ನಾವು ತೆಗೆದುಕೊಳ್ಳುವ ಮೆಡಿಸಿನ್ ಕೆಲಸ ಮಾಡದಿದ್ದರೂ ನಮ್ಮ ನಂಬಿಕೆ ಗಳು ಕೆಲಸ ಮಾಡುತ್ತವೆ.. ನೀವೆಲ್ಲರೂ ನನ್ನನ್ನು ಚೆನ್ನಾಗಿ ನಗಿಸಿ.. ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ಎಂದಿದ್ದಾರೆ.. ಇನ್ನು ರೇಖಾ ಅವರ ಮಾತುಗಳನ್ನು ಕೇಳಿದ ಪ್ರೇಕ್ಷಕರು ಆದಷ್ಟು ಬೇಗ ರೇಖಾ ಅವರು ಗುಣಮುಖರಾಗಲಿ ಎಂದು ಹಾರೈಸಿದ್ದಾರೆ..

ಇತ್ತೀಚಿನ ಒತ್ತಡದ ಬದುಕಿನಲ್ಲಿ ಜೀವನದಲ್ಲಿ ಯಾವುದನ್ನೋ ಪಡೆಯಲು ಹೋಗಿ ಇನ್ನೇನನ್ನೋ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಅಕ್ಷರಶಃ ಸತ್ಯ.. ಜೀವನದಲ್ಲಿ ಕೆಲಸ ಹಣ ಜವಾಬ್ದಾರಿಗಳು ಎಲ್ಲವೂ ಮುಖ್ಯ ನಿಜ.. ನಮ್ಮ ನಮ್ಮ ಜವಾಬ್ದಾರಿಗಳನ್ನು ನಾವೇ ನಿಭಾಯಿಸಬೇಕು.. ಆದರೆ ಅಷ್ಟೇ ಮುಖ್ಯವಾದದ್ದು ನಮ್ಮ ಆರೋಗ್ಯವೂ ಸಹ ಎಂಬುದನ್ನು ಮರೆಯಬಾರದಷ್ಟೇ.. ಆರೋಗ್ಯವೂ ಸಹ ಒಂದು ರೀತಿಯ ಸಂಪತ್ತೇ ಎಂಬುದನ್ನು ಅರಿತಾಗ ಮಾತ್ರವೇ ಜೀವನ ಸುಲಭ ಸಾಧ್ಯ.. ರೇಖಾ ಅವರು ಆದಷ್ಟು ಬೇಗ ಗುಣಮುಖರಾಗಲಿ..