ಈ ದಡೂತಿ ಮನುಷ್ಯ ನನಗೆ ಮೋಸ ಮಾಡಿಬಿಟ್ಟ.. ಬೀದಿಗೆ ಬಿದ್ದ ನಟಿ ಮಹಾಲಕ್ಷ್ಮಿ..

0 views

ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರ್.. ಬಹುಶಃ ಸಾಮಾಜಿಕ ಜಾಲತಾಣ ಬಳಸುವ ಬಹುತೇಕ ಎಲ್ಲರಿಗೂ ಈ ಜೋಡಿಯ ಪರಿಚಯ ಇದ್ದೇ ಇರುತ್ತದೆ.. ನೋಡಲು ಸುಂದರಿಯಾಗಿದ್ದ ಮಹಾಲಕ್ಷ್ಮಿ ಹಣವಿರುವ ಕಾರಣ ದಪ್ಪಗಿದ್ದರೂ ಪರವಾಗಿಲ್ಲ ಎಂದು ರವೀಂದರ್ ಅವರನ್ನು ಮದುವೆಯಾಗಿದ್ದರು.. ಆದರೆ ಈಗ ಈ ನಟಿ ಗಂಡನಿಂದಲೇ ಮೋಸ ಹೋಗಿ ಬೀದಿಗೆ ಬಿದ್ದಿದ್ದಾರೆ.. ಹೌದು ಖುದ್ದು ನಟಿ ಮಹಾಲಕ್ಷ್ಮಿ ಅವರೇ ಗಂಡ ಮೋಸ ಮಾಡಿದ್ದನ್ನು ಎಳೆ ಎಳೆಯಾಗಿ ಬಿಚ್ವಿಟ್ಟಿದ್ದಾರೆ.. ಹೌದು ತಾನು ಮೋಸ ಹೋದ ಬಗ್ಗೆ ಮಹಾಲಕ್ಷ್ಮಿ ಹೇಳಿಕೊಂಡು ಜನರೆದುರು ಕಣ್ಣೀರಿಟ್ಟಿದ್ದಾರೆ.. ಅಷ್ಟಕ್ಕೂ ಮಹಾಲಕ್ಷ್ಮಿ ಹಾಗೂ ರವೀಂದರ್ ಮದುವೆ ನಡೆದ ಕತೆ.. ಮತ್ತು ಆಕೆ ಏತಕ್ಕಾಗಿ ಮದುವೆಯಾದಳು ರವೀಂದರ್ ಮೋಸ ಮಾಡಿದ್ದೇಗೆ.. ಅಷ್ಟಕ್ಕೂ ಇವರೊಬ್ಬರು ಯಾರು ಸಂಪೂರ್ಣ ವಿಚಾರವೀಗ ಬಯಲಾಗಿದೆ..

ಹೌದು ಮಹಾಲಕ್ಷ್ಮಿ ಒಬ್ಬ ನಟಿ ಹಾಗೂ ನಿರೂಪಕಿಯಾಗಿರುತ್ತಾರೆ.. ಈಕೆ ತಮಿಳು ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡವರು.. ಅಲ್ಲಿನ ಕಿರುತೆರೆಯಲ್ಲಿ ಒಂದಷ್ಟು ಹೆಸರನ್ನೂ ಸಹ ಮಾಡಿದ್ದರು.. ಇನ್ನು ರವೀಂದರ್ ಚಂದ್ರಶೇಖರ್ ಒಬ್ಬ ನಿರ್ಮಾಪಕ.. ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದವ.. ಹಾಗೆಯೇ ಕೆಲ ಸಿನಿಮಾಗಳಿಗೂ ಸಹ ಬಂಡವಾಳ ಹೂಡಿದ್ದವ.. ಇನ್ನು ನೋಡಲು ಅತಿ ದಪ್ಪ ಇರುವ ರವೀಂದರ್ ಅದಾಗಲೇ ಒಂದು ಮದುವೆಯಾಗಿ ಸುಂದರ ಜೀವನ ಕಟ್ಟಿಕೊಂಡಿದ್ದರು.. ಇತ್ತ ರವೀಂದರ್ ಗೆ ಮಹಾಲಕ್ಷ್ಮಿಯ ಪರಿಚಯವಾಯಿತು.. ನೋಡಲು ಸುಂದರವಾಗಿದ್ದ ಮಹಾಲಕ್ಷ್ಮಿ ಅತ್ತ ಹಣದ ಖಜಾನೆ ತೋರುತ್ತಿದ್ದ ನಿರ್ಮಾಪಕ ರವೀಂದರ್ ಇಬ್ಬರ ನಡುವೆ ಸ್ನೇಹವಾಯಿತು.. ಸ್ನೇಹ ಪ್ರೀತಿಯಾಗಿ ಅತ್ತ ರವೀಂದರ್ ತನ್ನ ಮೊದಲ ಪತ್ನಿಗೆ ಡಿವೋರ್ಸ್ ಸಹ ನೀಡಿಯಾಗಿತ್ತು.. ಇನ್ನು ಈ ಜೋಡಿ ಒಂದಷ್ಟು ದಿನಗಳ ಕಾಲ ಒಟ್ಟಿಗೆ ತಿರುಗಾಡಿ ಕೊನೆಗೆ ಮದುವೆಯಾಗುವ ನಿರ್ಧಾರಕ್ಕೆ ಬಂದರು..

ಎರಡನೇ ಮದುವೆಯಾದರೂ ಸಹ ಅದ್ಧೂರಿಯಾಗಿ ಮದುವೆ ಸಿದ್ಧತೆ ನಡೆದು ತಮಿಳು ತೆಲುಗು ಅಷ್ಟೇ ಏಕೆ ಕನ್ನಡದ ನೆಲದಲ್ಲಿಯೂ ಈ ಜೋಡಿಯ ಮದುವೆ ಸುದ್ದಿ ಬಾರಿ ದೊಡ್ಡ ಮಟ್ಟದಲ್ಲಿಯೇ ವೈರಲ್ ಆಗಿತ್ತು.. ಇನ್ನು ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.. ಅದರಲ್ಲೂ ಹಣವಿದ್ದರೆ ಎಂತವರನ್ನೂ ಸಹ ಮದುವೆಯಾಗಿಬಿಡ್ತಾರೆ ಕೆಲವರು ಎನ್ನುವ ಮಾತುಗಳು ಟೀಕೆಗಳು ಕಮೆಂಟ್ ಗಳು ಎಲ್ಲವೂ ಕೇಳಿ ಬಂದಿತ್ತು.. ಆದರೆ ಅದ್ಯಾವುದನ್ನೂ ಕೇರ್ ಮಾಡದ ಮಹಾಲಕ್ಷ್ಮಿ ಹಾಗೂ ರವೀಂದರ್ ತಮ್ಮದೇ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಫೇಸ್ ಬುಕ್ ಇನ್ಸ್ಟಾಗ್ರಾಮ್ ಹೀಗೆ ಅನೇಕ ಕಡೆ ಬಹಳಷ್ಟು ಫೋಟೋಗಳನ್ನು ಹಂಚಿಕೊಳ್ಳೋದು.. ಗಂಡ ನನಗೆ ಚಿನ್ನ ಕೊಡಿಸಿದ.. ಚಿನ್ನದಂತ ಮಂಚ ಕೊಡಿಸಿದ ಹೀಗೆ ಗಂಡಕೊಟ್ಟ ಉಡುಗೊರೆಗಳನ್ನೆಲ್ಲಾ ಪೋಸ್ಟ್ ಮಾಡುತ್ತಿದ್ದರು.. ಅಷ್ಟೇ ಅಲ್ಲ ಕೊಂಚ ಅತಿರೇಕವಾಗಿಯೂ ಇಬ್ಬರು ಆತ್ಮೀಯವಾಗಿರೋದನ್ನೂ ಸಹ ಮಹಾಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.. ಇನ್ನು ಕಳೆದ ಒಂದು ವರ್ಷದಿಂದ ಅತಿ ಹೆಚ್ಚು ಟ್ರೋಲ್ ಆದ ಜೋಡಿಗಳ ಪೈಕಿ ಈ ಜೋಡಿಯ ಮೊದಲ ಸ್ಥಾನ ಪಡೆದರೂ ಆಶ್ಚರ್ಯ ಪಡಬೇಕಿಲ್ಲ.. ಆದರೆ ಎಷ್ಟೇ ಟ್ರೋಲ್ ಆದರೂ ಕ್ಯಾರೆ ಎನ್ನದ ಜೋಡಿ ಆಗಾಗ ಫೋಟೋ ಹಂಚಿಕೊಳ್ಳುತ್ತಲೇ ಇದ್ದದ್ದನ್ನು ಕಂಡು ಇಬ್ಬರ ನಡುವೆ ನಿಜವಾದ ಪ್ರೀತಿ ಇರಬಹುದು ಎನ್ನುವಂತಹ ಅಭಿಪ್ರಾಯ ಕೂಡ ಕೇಳಿ ಬಂದಿದ್ದು ಆ ಜೋಡಿಯ ಬಗ್ಗೆ ಕಮೆಂಟ್ ಮಾಡುವುದು ಸಹ ಕಡಿಮೆಯಾಯಿತು.. ಇನ್ನು ಮೊನ್ನೆ ಮೊನ್ನೆಯಷ್ಟೇ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.. ಆದರೆ ಈಗ ಈ ಜೋಡಿಯ ನಿಜಬಣ್ಣ ಬಯಲಾಗಿದೆ.. ಮಹಾಲಕ್ಷ್ಮಿ ಅಕ್ಷರಶಃ ಬೀದಿಗೆ ಬಂದಿದ್ದು ತನ್ನ ಗಂಡ ಮಾಡಿದ ಮೋಸಗಳ ಬಗ್ಗೆ ಎಳೆವೆಳೆಯಾಗಿ ಬಿಚ್ಚಿಟ್ಟಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ರವೀಂದರ್ ಚಂದ್ರಶೇಖರ್ ನನ್ನು ಪೋಲೀಸರು ಬಂಧಿಸಿದ್ದರು.. ವಂಚನೆ ಮಾಡಿರುವ ಆರೋಪದಲ್ಲಿ ರವೀಂದರ್ ಪೋಲೀಸರ ವಶದಲ್ಲಿದ್ದನು.. ಇತ್ತ ಗಂಡ ಏನು ತಪ್ಪು ಮಾಡಿಲ್ಲ ಎಂದಿದ್ದ ಮಹಾಲಕ್ಷ್ಮಿ ಆತನ ಪರವಾಗಿಯೇ ನಿಂತಿದ್ದರು.. ಗಂಡ ಜೈಲಿನಲ್ಲಿದ್ದರೂ ಕೂಡ ಇವರ ಇನ್ಸ್ಟಾಗ್ರಾಮ್ ರೀಲ್ಸ್ ಗೀಳೇನು ಕಡಿಮೆಯಾಗಿರಲಿಲ್ಲ.. ಹೊಸ ಹೊಸ ಸೀರೆಗಳಲ್ಲಿ ಫೋಟೋ ಚಿತ್ರೀಕರಣ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಲೇ ಇದ್ದರು.. ಇದನ್ನು ನೋಡಿದ ಜನ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದರು.. ಆದರೆ ಈಗ ನಿನ್ನೆ ಮಾದ್ಯಮದ ಮುಂದೆ ಬಂದು ತನ್ನ ಗಂಡ ಮೋಸ ಮಾಡಿರುವುದರ ಬಗ್ಗೆ ತಿಳಿಸಿದ್ದಾರೆ..

ಹೌದು ತನ್ನ ಗಂಡ ರವೀಂದರ್ ಸರಿ ಇಲ್ಲ.. ನನಗೆ ಮೋಸ ಮಾಡಿ ಮದುವೆಯಾಗಿದ್ದಾನೆ.. ಅವನು ಹೇಳಿರೋದೆಲ್ಲಾ ಸುಳ್ಳು ಎಂದಿದ್ದಾರೆ.. ಮಾಧವ ಮೀಡಿಯಾ ದ ಉದ್ಯಮಿ ಬಾಲಾಜಿ ಎಂಬುವವರು ರವೀಂದರ್ ಮೇಲೆ ಕೇಸ್ ಹಾಕಿದ್ದರು.. ಈ ನಿರ್ಮಾಪಕ ರವೀಂದರ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವುದಾಗಿ ನಂಬಿಸಿ ಅದಕ್ಕೆ ಬಂಡವಾಳ ಹಾಕುವಂತೆ ಬಾಲಾಜಿಗೆ ಒತ್ತಾಯಿಸಿದ್ದ.. ಅದನ್ನು ನಂಬಿದ ಬಾಲಾಜಿ ಹದಿನೈದು ಕೋಟಿ ಬಂಡವಾಳ ಹಾಕಿದ್ದರು.. ಆದರೆ ಆನಂತರ ವಿದ್ಯುತ್ತೂ ಇಲ್ಲ ಘನ ತ್ಯಾಜ್ಯವೂ ಇಲ್ಲ.. ಇತ್ತ ಕೊಟ್ಟ ದುಡ್ಡೂ ಇಲ್ಲ.. ಸಾಕಷ್ಟು ಬಾರಿ ತಾನು ಕೊಟ್ಟ ಹಣವನ್ನು ಕೇಳಿ ಕೇಳಿ ಸಾಕಾಗಿ ಕೊನೆಗೆ ಪೋಲೀಸರಿಗೆ ತಿಳಿಸಿದ್ದು ಸಧ್ಯ ರವೀಂದರ್ ಪೋಲೀಸರ ವಶದಲ್ಲಿದ್ದಾನೆ..

ಇತ್ತ ಮಹಾಲಕ್ಷ್ಮಿ ಈ ಎಲ್ಲಾ ವಿಚಾರ ತಿಳಿಸಿದ್ದು.. ನನ್ನ ಗಂಡ ನನಗೂ ಮೋಸ ಮಾಡಿಬಿಟ್ಟ.. ಈ ದಡೂತಿ ಮನುಷ್ಯ ನನಗೆ ಮೋಸ ಮಾಡಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.. ಈ ರೀತಿ ಹತ್ತಾರು ಕೋಟಿ ರೂಪಾಯಿ ಮೋಸ ಮಾಡಿರುವ ವಿಚಾರವನ್ನು ನನಗೆ ಹೇಳೇ ಇರಲಿಲ್ಲ.. ನಾನು ಅವನನ್ನು ನಂಬಿ ಮದುವೆಯಾದೆ.. ನಾನು ಇವನನ್ನು ನಂಬಿಕೊಂಡು ನನ್ನ ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟೆ.. ಇವನನ್ನು ಮದುವೆಯಾಗಿ ಈಗ ಬೀದಿಗೆ ಬಿದ್ದೆ ಎಂದು ಕಣ್ಣೀರು ಸುರಿಸಿದ್ದಾರೆ.. ಅವನು ತನ್ನ ಮೊಬೈಲ್ ನಂಬರ್ ಅನ್ನು ಆಗಾಗ ಬದಲಿಸಿಕೊಳ್ಳುತ್ತಿದ್ದ.. ಇದೆಲ್ಲವೂ ಜನರಿಗೆ ಮೋಸ ಮಾಡುವ ಸಲುವಾಗಿ.. ಆದರೆ ಅದ್ಯಾವುದೂ ನನ್ನ ಗಮನಕ್ಕೆ ಬಾರದೇ ಹೋಯಿತು.. ಈ ಎಲ್ಲಾ ಘಟನೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ.. ಒತ್ತಡದಲ್ಲಿದ್ದೇನೆ ಎಂದು ಅಳುತ್ತಿದ್ದಾರೆ..

ಇನ್ನು ಇವರ ಮಾತುಗಳನ್ನು ಕೇಳಿ ಇವರ ವೀಡಿಯೋ ನೋಡಿ ಜನರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.‌ ಕೆಲವೊಬ್ಬರು ನಿರೂಪಕಿ ಮಹಾಲಕ್ಷ್ಮಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರೆ ಮತ್ತೆ ಕೆಲವರು ಹಣ ನೋಡಿ ಮದುವೆಯಾದರೆ ಇದೇ ಪಾಡು ಎಂದಿದ್ದಾರೆ.. ಇನ್ನೂ ಕೆಲವರು ಹಣ ಇದ್ದರೆ ಮಾತ್ರ ಸಾಲದು ಗುಣ ಇರುವವನನ್ನು ಮದುವೆಯಾಗಿದ್ದರೆ ಇದ್ದುದ್ದರಲ್ಲೇ ರಾಣಿಯಾಗಿ ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.. ಮತ್ತಷ್ಟು ಮಂದಿ ಹಣ ಇದೆ ಎಂದು ಇವನನ್ನು ನಂಬಿ ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟರೆ ಹೀಗೇ ಆಗೋದು ಎಂದೂ ಸಹ ಹೇಳಿದ್ದು ನಟಿ ಮಹಾಲಕ್ಷ್ಮಿ ರವೀಂದರ್ ಅವರಿಂದಲೂ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.. ಒಟ್ಟಿನಲ್ಲಿ ಅದೆಷ್ಟೇ ಟ್ರೋಲ್ ಆದರೂ ಲೆಕ್ಕಿಸದೇ ಸಂತೋಷವಾಗಿದ್ದ ಜೋಡಿ ಈಗ ಕಣ್ಣೀರಿಡುತ್ತಾ ದೂರಾಗಿದ್ದು ಜೀವನದಲ್ಲಿ ಹಣ ಮುಖ್ಯ ನಿಜ ಆದರೆ ಹಣವೇ ಎಲ್ಲಾ ಅಲ್ಲ ಎಂಬುದನ್ನು ತೋರಿದಂತಾಗಿದೆ..