ಮೇಘನಾ ಬಾಳಲ್ಲಿ ಮತ್ತೆ ಪ್ರೀತಿ.. ಎರಡನೇ ಮದುವೆಯ ವಿಚಾರವಾಗಿ ನೇರವಾಗಿ ಮಾತನಾಡಿದ ಮೇಘನಾ ರಾಜ್..

0 views

ಸ್ಯಾಂಡಲ್ವುಡ್ ನಟ.. ಸರ್ಜಾ ಕುಟುಂಬದ ಮಗ ಚಿರು ಸರ್ಜಾ ಅಗಲಿ ನೋಡು ನೋಡುತ್ತಲೇ ಮೂರು ವರ್ಷಗಳು ಕಳೆದೇ ಹೋದವು.‌. ಆದರೆ ಮೇಘನಾ ರಾಜ್ ಮಾತ್ರ ಚಿರು ಅಗಲಿಕೆಯ ಆ ಘಟನೆಯಿಂದ ಹೊರ ಬಂದಂತೆ ಕಾಣುತ್ತಿಲ್ಲ.. ನಿಧಾನವಾಗಿ ಆ ಘಟನೆ ಮರೆತು ಎಲ್ಲರೊಟ್ಟಿಗೆ ಜೀವನ ನಡೆಸುವ ಪ್ರಯತ್ನ ಮಾಡುತ್ತಿದ್ದರೂ ಸಹ ಆ ಒಂದು ಜೀವ ಇವರ ಬಾಳಲ್ಲಿ ಇಲ್ಲದಿರುವ ಆ ಕೊರತೆ ಎಂತವರಿಗೂ ಮೇಘನಾ ಮೆಲೆ ಅನುಕಂಪ ಬರುವಂತೆ ಮಾಡುತ್ತದೆ.. ಇನ್ನು ಇತ್ತ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾನ ಪಾಲನೆ ಪೋಷಣೆಯಲ್ಲಿ ಬ್ಯುಸಿ ಆಗಿರುವುದರ ಜೊತೆಗೆ ತಮ್ಮ ಸಿನಿಮಾ ಜೀವನವನ್ನೂ ಮತ್ತೆ ಆರಂಭಿಸಿರುವುದು ಒಳ್ಳೆಯ ವಿಚಾರ.. ಕೆಲ ದಿನಗಳ ಹಿಂದಷ್ಟೇ ಮೇಘನಾ ರಾಜ್ ಅಭಿನಯದ ತತ್ಸಮ ತದ್ಭವ ಸಿನಿಮಾ ಕೂಡ ಬಿಡುಗಡೆಯಾಗಿ ತಕ್ಕ ಮಟ್ಟಿನ ಯಶಸ್ಸನ್ನೂ ಸಹ ಕಂಡಿತು.. ಇನ್ನೂ ಈ ಸಿನಿಮಾದ ಬೆನ್ನಲ್ಲೇ ಮತ್ತಷ್ಟು ಸಿನಿಮಾಗಳನ್ನೂ ಸಹ ಮೇಘನಾ ರಾಜ್ ಒಪ್ಪಿಕೊಂಡಿದ್ದು ಸಿನಿಮಾ ರಂಗದಲ್ಲೇ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ..

ಇದರ ನಡುವೆ ಎಫ್ ಎಂ ಚಾನಲ್ ಒಂದಕ್ಕೆ ಸಂದರ್ಶನ ನೀಡಿದ್ದು ಆ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ಮತ್ತೆ ಪ್ರೀತಿ ಹುಟ್ಟುವ ಹಾಗೂ ಎರಡನೇ ಮದುವೆ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.. ಹೌದು ಚಿರು ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಅವರ ಜೀವನದಲ್ಲಿ ಸಾಕಷ್ಟು ಪ್ರಶ್ನೆಗಳು ಕೇಳಿ ಬಂದಿದ್ದವು.. ಅದರಲ್ಲಿ ಪ್ರಮುಖವಾದದ್ದು ಮೇಘನಾ ರಾಜ್ ಅವರ ಎರಡನೇ ಮದುವೆ ವಿಚಾರ.. ಜನ ಸಾಮಾನ್ಯರು ಮಾತ್ರವಲ್ಲ ಅವರ ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಮೇಘನಾ ರಾಜ್ ಅವರಿಗೆ ಎರಡನೇ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಕೇಳಿ ಬಂದಿದೆ.. ಆದರೆ ಮೇಘನಾ ರಾಜ್ ಮಾತ್ರ ಈ ಬಗ್ಗೆ ಯಾವುದೇ ಉತ್ತರ ನೀಡದೇ ಆ ವಿಚಾರವನ್ನು ನಿರಾಕರಿಸುತ್ತಲೇ ಬಂದಿದ್ದರು.. ಆದರೆ ಅವರ ಬಾಳಲ್ಲಿ ಮತ್ತೆ ಪ್ರೀತಿ ಹುಟ್ಟಿದರೆ ಅದನ್ನು ಅವರು ಒಪ್ಪಿಕೊಳ್ಳುವರಾ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದಾರೆ..

ಹೌದು ರೇಡಿಯೋ ಸಿಟಿ ವಾಹಿನಿ ಮಾಡಿದ್ದ ಸಂದರ್ಶನದಲ್ಲಿ ಮೇಘನಾ ರಾಜ್ ಈ ಬಗ್ಗೆ ಮಾತನಾಡಿದ್ದಾರೆ.. ಹೌದು ನಿರೂಪಕಿ ಮೇಘನಾ ರಾಜ್ ಅವರಿಗೆ “ನೀವು ಇನ್ನೂ ಯಂಗ್ ಮದರ್ ಇದೀರಾ.. ನಿಮ್ಮ ಬಾಳಲ್ಲಿ ಮತ್ತೊಮ್ಮೆ ಪ್ರೀತಿ ಹುಟ್ಟಿದರೆ ನೀವು ಅದನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳಿದರು.. ಅದಕ್ಕೆ ಉತ್ತರ ಕೊಟ್ಟ ಮೇಘನಾ ರಾಜ್ ಅವರ ನೇರ ಮಾತುಗಳು ನಿಜಕ್ಕೂ ಅವರ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ.. ಅವರ ಮಾತುಗಳಿಗೆ ಬೆಂಬಲವನ್ನೂ ಸಹ ವ್ಯಕ್ತ ಪಡಿಸಿದ್ದಾರೆ..

ಹೌದು ಮೇಘನಾ ರಾಜ್ ಮಾತನಾಡಿ.. ಮತ್ತೊಮ್ಮೆ ನನ್ನ ಬಾಳಲ್ಲಿ ಪ್ರೀತಿ ಹುಟ್ಟಿದರೆ ಆ ಸಮಯದಲ್ಲಿ ನಾನು ಅದನ್ನು ಒಪ್ಪಿಕೊಳ್ಳುತ್ತೀನೋ ಇಲ್ಲವೋ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ.. ಆದರೆ ಬಹುಶಃ ಆ ಜಾಗದಲ್ಲಿ ಯಾರೋ ಇದ್ದಾಗ ಉತ್ತರ ಬರಬಹುದೇನೋ.. ಈಗ‌ನನಗೆ ನಿಜವಾಗಿಯೂ ಗೊತ್ತಿಲ್ಲ.. ಈ ಬಗ್ಗೆ ನನ್ನನ್ನು ಯಾರೂ ಕೇಳಿಲ್ಲ ಎಂದರೆ.. ಅದು ನಾನು ಸುಳ್ಳು ಹೇಳಿದಂತಾಗುತ್ತದೆ.. ಈ ಬಗ್ಗೆ ನನ್ನ ಸುತ್ತ ಮುತ್ತ ಒಂದು ಮಾತುಕತೆ ನಡೆಯುತ್ತಲೇ ಇರುತ್ತದೆ.. ಆದರೆ ಸಧ್ಯ ಮಾನಸಿಕವಾಗಿ ನಾನು ರೆಡಿಯಾಗಿಲ್ಲ.. ಅಂತಹ ಸಂದರ್ಭ ಬಂದರೆ ಅ ಸಮಯಕ್ಕೆ ನನಗೆ ಯಾವುದು ಸರಿ ಎಂದು ಕಾಣುತ್ತದೆಯೋ ಅದನ್ನೇ ನಾನು ಮಾಡುತ್ತೇನೆ.. ಎಂದಿದ್ದಾರೆ..

ಅಷ್ಟೇ ಅಲ್ಲದೇ ತಮ್ಮ ಬಾಳಿನ ಕೆಲವೊಂದು ನೋವುಗಳನ್ನು ಹಂಚಿಕೊಂಡಿರುವ ಮೇಘನಾ ರಾಜ್.. ಜನರು ನನ್ನನ್ನು ಮಾತನಾಡಿಸಿದಾಗ ಅವರಿಗೆ ಯಾವ ಉತ್ತರ ಬೇಕೋ ಅದನ್ನೇ ನಾನು ಕೊಡಬೇಕು.. ಅವರಿಗೆ ಏನು ಬೇಕೋ ಅದನ್ನೇ ನಾನು ಮಾತನಾಡಬೇಕು.. ಆ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ.. ಆದರೆ ನನ್ನನ್ನು ನನ್ನ ಹಾಗೆಯೇ ಇರಲು ಅವರು ಅವಕಾಶವನ್ನೇ ನೀಡಿಲ್ಲ ಎಂದಿದ್ದಾರೆ.. ಅಷ್ಟೇ ಅಲ್ಲದೇ ನನಗೆ ಯಾರೂ ಸಹ ಅನುಕಂಪ ತೋರುವುದು ಬೇಡ ಎನ್ನುವ ಮಾತುಗಳನ್ನೂ ಸಹ ಆಡಿದ್ದಾರೆ..

ಅಯ್ಯೋ ಮೇಘನಾ ಬಾಳಲ್ಲಿ ಹಾಗಾಯ್ತಲ್ಲ.. ಹೀಗಾಯ್ತಲ್ಲ.. ಅನ್ನುವ ಮಾತುಗಳನ್ನು ಆಡಿ ಅನುಕಂಪ ತೋರಿಸುವುದು ನಿಜಕ್ಕೂ ನನಗೆ ಇಷ್ಟವಿಲ್ಲ.. ಆ ಮಾತುಗಳನ್ನು ಕೇಳಿಸಿಕೊಳ್ಳುವುದೂ ಸಹ ಕಷ್ಟವಾಗುತ್ತದೆ.. ಅದು ಹೇಗೆ ಎಂದರೆ ಏನೋ ಒಂದು ರೀತಿ ಮುದುಡಿ ಹೋಗಿ ಎಲ್ಲೋ ಒಂದು ಕಡೆ ಬಚ್ವಿಟ್ಟುಕೊಂಡು ಆಗ ತಾನೆ ಅರಳುವುದಕ್ಕೆ ಶುರು ಮಾಡಿದ ಸಮಯದಲ್ಲಿ ಅವರುಗಳು ಬಂದು ಅಯ್ಯೋ ಪಾಪ.. ಅಯ್ಯೋ ಪಾಪ ಅಂತ ಕುಕ್ಕಿದರೆ ಅವರು ಸಹಾಯ ಮಾಡಲು ಬಂದಿದ್ದಾರೆ ಅನಿಸೋದಿಲ್ಲ.. ಇನ್ನೂ ಮುದುಡಿಸೋದಕ್ಕೆ ಬಂದಿದ್ದಾರೆ ಎನಿಸುತ್ತದೆ.. ಎಂದಿದ್ದಾರೆ.. ಒಟ್ಟಿನಲ್ಲಿ ಸಿನಿಮಾ ಜೀವನದಲ್ಲಿ ಹೊಸ ಪುಟ ಆರಂಭಿಸಿರುವ ಮೇಘನಾ ರಾಜ್ ಅವರು ನಿಜ ಜೀವನದಲ್ಲಿಯೂ ಅಂತಹ ಸಂದರ್ಭ ಬಂದರೆ ಅವರಿಗೆ ಸರಿ ಎನಿಸುವ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದಾರೆ.. ಇನ್ನು ಈ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಐದ್ದು ಮೇಘನಾ ರಾಜ್ ಅವರಿಗೆ ಬೆಂಬಲವನ್ನೂ ಸಹ ಕಮೆಂಟ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ..