ಸಂಗೀತಾಗೆ ಆ ಮಾತನ್ನು ಬಳಸಿದ ವಿನಯ್.. ಬಿಗ್ ಬಾಸ್ ಗೆ ಬರುವ ಮುನ್ನ ಸಂಗೀತಾ ಮಾಡಿದ್ದ ತಪ್ಪೇನು?

0 views

ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಒಂದು ರೀತಿ ಜಗಳದ ಸೀಸನ್ ಎನ್ನಬೇಕೋ ಅಥವಾ ಸ್ಪರ್ಧಿಗಳು ಒಬ್ಬರಿಗೊಬ್ಬರು ಉರಿದುಕೊಳ್ಳುತ್ತಿರುವ ಸೀಸನ್ ಎನ್ನಬೇಕೋ ತಿಳಿಯದು.. ಪ್ರತಿ ದಿನವೂ ಒಬ್ಬರ ಮೇಲೊಬ್ಬರು ಕೂಗಾಡೋದು ಕಿರುಚಾಡುವುದು.. ಜಗಳ ಕಾಯುವುದು.. ಒಬ್ಬರನ್ನು ಟಾರ್ಗೆಟ್ ಮಾಡುವುದು ಇದೇ ಆಗಿ ಹೋಗಿದೆ.. ಅದರಲ್ಲೂ ಬಿಗ್ ಬಾಸ್ ಮನೆಗೆ ಬರುವ ಮೊದಲು ಪರಿಚಯವಿದ್ದ ಸ್ಪರ್ಧಿಗಳು ಆಗ ಆದ ಮನಸ್ತಾಪಗಳನ್ನು ಈಗ ಬಿಗ್ ಬಾಸ್ ಮನೆಯೊಳಗೆ ಕ್ಯಾರಿ ಮಾಡುತ್ತಿದ್ದು ಒಬ್ಬ ಹೆಣ್ಣು ಎಂದೂ ಸಹ ನೋಡದೇ ಕೆಟ್ಟ ಭಾಷೆ ಪ್ರಯೋಗ ಮಾಡುವ ಮಟ್ಟಕ್ಕೆ ಬಂದು ನಿಂತಿದೆ..

ಹೌದು ವಿನಯ್ ಮತ್ತು ಸಂಗೀತಾ ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಈ ಇಬ್ಬರ ನಡುವೆ ಏನೋ ಸರಿ ಇರಲಿಲ್ಲ.. ಎಂಬುದು ಎಲ್ಲರಿಗೂ ತಿಳಿದೇ ಇದೆ.. ಅತ್ತ ಸಂಗೀತಾ ಕೂಡ ಮೊದ ಮೊದಲು ಧೈರ್ಯವಾಗಿ ವಿನಯ್ ಗೆ ಎದುರಾಗಿ ನಿಲ್ಲುತ್ತಿದ್ದರು.. ಅಷ್ಟೇ ಅಲ್ಲ ವಿನಯ್ ಎದುರಿಗೆ ಕೂಗಾಡಿದ ಉದಾಹರಣೆಗಳೂ ಇವೆ.. ಆದರೆ ಅದ್ಯಾಕೋ ಎರಡನೇ ಮೂರನೇ ವಾರದಲ್ಲಿ ಸೈಲೆಂಟ್ ಆದ ಅದರಲ್ಲೂ ಒಂದು ರೀತಿ ಭಯ ಪಟ್ಟೇ ಸುಮ್ಮನಾದ ಸಂಗೀತಾಗೆ ಕಳೆದ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕಳುಹಿಸಿದ ಪ್ರೇಕ್ಷಕರ ಉಡುಗೊರೆ ಕರ್ನಾಟಕದ ಕ್ರಶ್ ಆಗಿದ್ದವರು ಈಗ ಕ್ರಶ್ ಆಗಿರುವ ಪೇಪರ್ ಆಗಿದ್ದೀರಿ ಎನ್ನುವ ಗಿಫ್ಟ್ ಸಂಗೀತ ಅವರನ್ನು ಕೊಂಚ ಬದಲಿಸಿದಂತೆ ಕಾಣುತ್ತಿದೆ.. ಇನ್ನು ಇತ್ತ ವಿನಯ ಒಬ್ಬರ ಮೇಲೆ ಒಬ್ಬರಂತೆ ಎಲ್ಲರ ಜೊತೆಯೂ ವಿನಾಕಾರಣ ಕೂಗಾಡುತ್ತಿರುವುದು ಬಹುತೇಕ ಪ್ರೇಕ್ಷಕರಿಗೆ ಕಿರಿಕಿರಿ ಆಗಿರೋದು ಉಂಟು.. ಇನ್ನು ಇಂದು ಬಿಗ್ ಬಾಸ್ ಮನೆಯಲ್ಲಿ ಸಂಗೀತಾಗೆ ಕೀಳು ಭಾಷೆಯನ್ನೂ ಸಹ ಪ್ರಯೋಗ ಮಾಡುದ್ದಾರೆ.. ಹೌದು ನಿನ್ನೆಯಿಂದ ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಸೊಗಡಲ್ಲಿರುವ ಎರಡು ಮನೆತನದ ಟಾಸ್ಕ್ ನಡೆಯುತ್ತಿದ್ದು ವಿನಯ್ ಒಂದು ಮನೆಯ ಮುಖ್ಯಸ್ಥನಾದರೆ.. ಇತ್ತ ಸಂಗೀತಾ ಮತ್ತೊಂದು ಮನೆಯ ಮುಖ್ಯಸ್ಥೆಯಾಗಿದ್ದಾರೆ..

ಇನ್ನು ಟಾಸ್ಕ್ ನ ಮುಂದುವರೆದ ಭಾಗವಾಗಿ ಇಂದು ಬಿಗ್ ಬಾಸ್ ಕಳುಹಿಸಿರುವ ಕೆಲ ವಸ್ತುಗಳಿಗಾಗಿ ಎರಡೂ ತಂಡ ಮುಗಿಬಿದ್ದಿದ್ದು ಈ ಸಮಯದಲ್ಲಿ ಎರಡೂ ತಂಡದ ನಡುವೆ ದೊಡ್ಡ ಜಗಳವೇ ಆಗಿದೆ.. ಹೌದು ಬಿಗ್ ಬಾಸ್ ಕೊಟ್ಟ ಸಾಮಾಗ್ರಿಗಳನ್ನು ಕಿತ್ತುಕೊಳ್ಳುವ ಬರದಲ್ಲಿ ತಾವುಗಳು ಅಂದರೆ ಈ ಮನೆಯ ಸದಸ್ಯರು ಜವಾಬ್ದಾರಿಯುತ ಸೋ ಕಾಲ್ಡ್ ಸೆಲಿಬ್ರೆಟಿಗಳು ಎಂಬುದನ್ನೇ ಮರೆತಿದ್ದಾರೆ.. ಅಷ್ಟೇ ಅಲ್ಲದೇ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ತಮ್ಮ ನಿಜ ಬಣ್ಣವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.. ಹೌದು ಜಗಳದ ಸಮಯದಲ್ಲಿ ನಮ್ರತಾ ಗೌಡ ಹಾಗೂ ಸಂಗೀತಾ ನೀನು ಕಿತ್ತೋದೋಳು.. ನೀನು ಕಿತ್ತೋದೋಳು ಎಂದೆಲ್ಲಾ ಜಗಳವಾಡಿದ್ದು ತಮ್ಮ ನೈಜ್ಯ ರೂಪ ತೋರಿದ್ದಾರೆ.. ಅತ್ತ ವಿನಯ್ ಗೌಡ ಕೂಡ ಸಂಗೀತಾಗೆ ನಿನ್ನಂತ ಮರ್ಯಾದೆ ಇಲ್ಲದವಳ ಜೊತೆ ನಾನು ಮಾತನಾಡೋದಿಲ್ಲ ಎಂದಿದ್ದು ಮರ್ಯಾದೆ ಕಳೆದುಕೊಳ್ಳುವಂತಹ ಕೆಲಸ ಸಂಗೀತಾ ಏನು ಮಾಡಿದ್ದಾರೆ ಎಂಬುದೇ ಪ್ರೇಕ್ಷಕರ ಪ್ರಶ್ನೆಯಾಗಿದೆ.. ಬಿಗ್ ಬಾಸ್ ಮನೆಯೊಳಗೆ ಕೆಲವೊಮ್ಮೆ ಅತಿರೇಕವಾಗಿ ಆಡಿದ್ದರೂ ಕೂಡ ಮರ್ಯಾದೆ ಕಳೆದುಕೊಳ್ಳುವಂತಹ ನಡವಳಿಕೆ ಸಂಗೀತಾರಿಂದ ಬಂದಿಲ್ಲ.. ಆದರೆ ಮನೆಯಿಂದ ಹೊರಗೆ ಈ ಹಿಂದೆ ವಿನಯ್ ಹಾಗೂ ಸಂಗೀತಾ ಒಟ್ಟಿಗೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಅಭಿನಯಿಸಿದ್ದು ಆ ಸಮಯದಲ್ಲಿ ಈ ಇಬ್ಬರಿಗೂ ಮನಸ್ತಾಪಗಳು ಇದ್ದ ಮಾತುಗಳು ಕೇಳಿ ಬಂದಿದ್ದವು..

ಸಂಗೀತಾ ಕೂಡ ಧಾರಾವಾಹಿ ಅರ್ಧಕ್ಕೆ ಹೊರ ಬಂದಿದ್ದರು.. ಈಗ ಆ ಎಲ್ಲಾ ಕೋಪಗಳನ್ನು ಇಟ್ಟುಕೊಂಡು ವಿನಯ್ ಸಂಗೀತಾಗೆ ಮರ್ಯಾದೆ ಇಲ್ಲದವಳು ಎನ್ನುವ ಮಾತನಾಡಿರಬಹುದು ಎನ್ನಲಾಗಿದೆ.. ಒಟ್ಟಿನಲ್ಲಿ ಇಬ್ಬರ ನಡುವಿನ ಜಗಳ ಈಗ ಟಾಸ್ಕ್ ನಲ್ಲಿ ಎರಡು ಮನೆತನದ ಜಗಳವಾಗಿದ್ದು.. ವಿನಯ್ ಹಾಗೂ ಕಾರ್ತಿಕ್ ನಡುವೆ ಕೂಡ ಮಾತಿಗೆ ಮಾತು ನಡೆದಿದ್ದು ಕಾರ್ತಿಕ್ ನನ್ನು ಲೂಸರ್.. ನೀನು ಬಳೆ ತೊಟ್ಟುಕೊಂಡಿರುವವನು ಎಂದೆಲ್ಲಾ ವಿನಯ್ ಮಾತನಾಡಿದ್ದು ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ವಿನಯ್ ಗೆ ಕ್ಲಾಸ್ ತೆಗೆದುಕೊಳ್ಳಬಹುದು ಎನ್ನುವ ನಿರೀಕ್ಷೆ ಪ್ರೇಕ್ಷಕರಿಗೆ ಇದೆ.. ಇನ್ನು ಕಳೆದ ವಾರದಂತೆ ವಿನಯ್ ನ ಯಾವ ತಪ್ಪುಗಳನ್ನೂ ಮಾತನಾಡದೇ ಸುಮ್ಮನಾಗುವರಾ ಅಥವಾ ವಿನಯ್ ನ ಅಹಂಕಾರ ಮುರಿಯುವರ ವಾರಾಂತ್ಯದ ವರೆಗೆ ಕಾದು ನೋಡಬೇಕಾದರೆ.. ಸಂಗೀತಾ ಹಾಗೂ ವಿನಯ್ ನಡುವಿನ ಈ ಮಾತಿನ ಚಕಮಕಿ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ..