ಬೀಪ್‌ ಸೌಂಡ್‌ ಹಾಕುವಷ್ಟು ವಿನಯ್‌ ಸಂಗೀತಾಗೆ ಕೆಟ್ಟ ಪದಗಳನ್ನು ಬಳಸಲು ನಿಜವಾದ ಕಾರಣವೇನು.. ಈ ಹಿಂದೆ ಈ ಇಬ್ಬರ ಜೀವನದಲ್ಲಿ ನಡೆದ ಘಟನೆಯೇ ಕಾರಣ?

0 views

ಬಿಗ್‌ ಬಾಸ್‌ ಸೇಸನ್‌ ಹತ್ತು ಶುರುವಾಗಿ ಹತ್ತಿರ ಹತ್ತಿರ ಎರಡು ವಾರಗಳು ಕಳೆಯುತ್ತಾ ಬಂದಿದೆ.. ಇನ್ನು ಎಂದಿನಂತೆ ಎಲ್ಲಾ ಸೇಸನ್‌ ಗಳಲ್ಲಿಯೂ ಇರುವಂತೆ ಈ ಸೀಸನ್‌ ಗಳಲ್ಲಿಯೂ ತಮಾಷೆ ಗುಂಪುಗಾರಿಕೆ ಜೋಡಿಯ ನಡುವೆ ಪ್ರೀತಿ ಹೀಗೆ ಒಂದಷ್ಟು ವಿಚಾರಗಳು ಸಾಮಾನ್ಯ ಎನಿಸಿದರೂ ಕೂಡ ಗಲಾಟೆ ಜಗಳಗಳ ವಿಚಾರಕ್ಕೆ ಬರುವುದಾದರೆ ಈ ಸೇಸನ್‌ ನಲ್ಲಿ ಅದೇಕೋ ಪ್ರತಿದಿನವೂ ಒಂದಲ್ಲಾ ಒಂದು ಜಗಳಗಳು ನಡೆಯುತ್ತಲೇ ಇದೆ ಎನ್ನಬಹುದು.. ಇದಕ್ಕೆ ಮುಖ್ಯ ಕಾರಣ ಸಂಗೀತಾ ಹಾಗೂ ವಿನಯ್‌ ಎಂದರೂ ತಪ್ಪಾಗಲಾರದು.. ಬಿಗ್‌ ಬಾಸ್‌ ಮನೆಗೆ ಬಂದ ಮೊದಲ ದಿನದಿಂದಲೂ ಸಂಗೀತಾ ಹಾಗೂ ವಿನಯ್‌ ನಡುವೆ ಆಗಾಗ ಜಗಳಗಳು ಆಗುತ್ತಲೇ ಇದ್ದು ಇದು ಅತಿರೇಕಕ್ಕೂ ಕೂಡ ಹೋಗಿದ್ದುಂಟು.. ಅದರಲ್ಲೂ ಈ ಹಿಂದಿನ ವಿಚಾರಗಳನ್ನೆಲ್ಲಾ ತೆಗೆದು ಮಾತನಾಡಿ ಒಬ್ಬರನೊಬ್ಬರು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ಅನಿಸುವಷ್ಟು ಇಬ್ಬರ ನಡುವೆ ವೈಮನಸ್ಸು ಇರುವುದಂತೂ ಸತ್ಯ.. ಇನ್ನು ಇದೆಲ್ಲವೂ ಓಕೆ ಎಂದುಕೊಂಡು ಶೋ ನೋಡಿದರೂ ಕೂಡ ನಿನ್ನೆ ಆದ ಘಟನೆ ಅದೇಕೋ ಇಬ್ಬರ ನಡುವೆ ಏನೂ ಸರಿ ಇಲ್ಲ ಎಂದು ಪ್ರೇಕ್ಷಕರಿಗೆ ಅನಿಸಿದಂತೂ ಸತ್ಯ..

ಹೌದು ನಿನ್ನೆಯ ಸಂಚಿಕೆಯಲ್ಲಿ ವಿನಯ್‌ ಗೌಡ ಅವರು ಬೀಪ್‌ ಸೌಂಡ್‌ ಹಾಕುವಷ್ಟು ಸಂಗೀತಾ ಗೆ ಕೆಟ್ಟ ಪದಗಳನ್ನು ಬಳಸಿ ಬೈದಿದ್ದು ನಿಜಕ್ಕೂ ಪ್ರೇಕ್ಷಕರಿಗೆ ಮಾತ್ರವಲ್ಲ ಬಿಗ್‌ ಬಾಸ್‌ ಮನೆಯ ಸದಸ್ಯರಿಗೂ ಒಂದು ಕ್ಷಣ ಶಾಕ್‌ ಆದಂತಾಯಿತು.. ಅಷ್ಟಕ್ಕೂ ಆ ರೀತಿ ಕೆಟ್ಟ ಪದಗಳನ್ನೆಲ್ಲಾ ಬಳಸಿ ವಿನಯ್‌ ಸಂಗೀತಾ ಬಗ್ಗೆ ಮಾತನಾಡಲು ಏನು ಕಾರಣ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ.. ಹೌದು ಸಂಗೀತಾ ಹಾಗೂ ವಿನಯ್‌ ಗೌಡ ಬಿಗ್‌ ಬಾಸ್‌ ಸೇಸನ್‌ ಹತ್ತರಿಂದ ಪರಿಚಯವಲ್ಲ.. ಈ ಇಬ್ಬರೂ ಈ ಮೊದಲು ಒಂದಷ್ಟು ವರ್ಷಗಳಿಂದ ಒಬ್ಬರನೊಬ್ಬರು ತೀರಾ ಹತ್ತಿರದಿಂದ ನೋಡಿರುವ ಜೋಡಿ.. ಈ ಹಿಂದೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರಹರ ಮಹಾದೇವ ಧಾರಾವಾಹಿಯಲ್ಲಿ ಸಂಗೀತಾ ಹಾಗೂ ವಿನಯ್‌ ಗೌಡ ಜೋಡಿಯಾಘಿ ಅಭಿನಯಿಸಿದ್ದರು.. ಸಂಗೀತಾ ಸತಿಯಾಗಿದ್ದರೆ ವಿನಯ್‌ ಗೌಡ ಮಹಾದೇವನ ಪಾತ್ರದಲ್ಲಿ ಜೀವ ತುಂಬಿದ್ದರು.. ಇಬ್ಬರೂ ಸಹ ಅಕ್ಷರಶಃ ನಿಜವಾದ ಮಹಾದೇವ ಹಾಗೂ ಸತಿಯೇ ಎನ್ನುವಷ್ಟು ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದರು.. ಈ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡ ಆ ಧಾರಾವಾಹಿ ಸುವರ್ಣ ವಾಹಿನಿಗೆ ಹೊಸ ಮೈಲಿಗಲ್ಲಾಯಿತು.. ರೇಟಿಂಗ್‌ ನಲ್ಲಿ ಕುಸಿತ ಕಂಡಿದ್ದ ಸುವರ್ಣ ವಾಹಿನಿ ಮಹಾದೇವ ಧಾರಾವಾಹಿ ಮೂಲಕ ಮತ್ತೆ ಕಂಬ್ಯಾಕ್‌ ಮಾಡಿತು.. ರೇಟಿಂಗ್‌ ವಿಚಾರದಲ್ಲಿ ಭಕ್ತಿ ಪ್ರಧಾನ ಧಾರಾವಾಹಿಯೊಂದು ಹೊಸ ದಾಖಲೆಯನ್ನೇ ಮಾಡಿತ್ತು.. ಕೆಳಗಿನ ವೀಡಿಯೋ ನೋಡಿ..

ಇನ್ನು ಈ ಧಾರಾವಾಹಿ ನೋಡಿದ ಪ್ರೇಕ್ಷಕರು ಈ ಇಬ್ಬರನ್ನು ನಿಜವಾದ ಮಹಾದೇವ ಸತಿ ಎಂದೇ ಬಹಳ ಗೌರವ ನೀಎಇ ಮಾತನಾಡಿಸುತ್ತಿದ್ದ ಉದಾಹರಣೆಗಲೂ ಉಂಟು.. ಆದರೆ ಇಂತಹ ಜೋಡಿ ಈಗ ಬೊಗ್‌ ಬಾಸ್‌ ಮನೆಯಲ್ಲಿ ಹಾವು ಮುಂಗೂಸಿಯಂತೆ ಆಡಲು ಕಾರಣವಾದರೂ ಏನು? ಇದಕ್ಕೆ ಉತ್ತರ ವಿನಯ್‌ ಅವರ ಬಾಯಿಂದಲೇ ನಿನ್ನೆ ಹೊರಬಿದ್ದಿದೆ.. ಹೌದು ವಿನಯ್‌ ಗೌಡ ಹಾಗೂ ಸಂಗೀತಾ ಅವರು ಬಿಗ್‌ ಬಾಸ್‌ ಮನೆಗೆ ಬರುತ್ತಿರುವ ವಿಚಾರ ಪರಸ್ಪರ ಇಬ್ಬರಿಗೂ ತಿಳಿದಿರಲಿಲ್ಲ.. ಸಾಮಾನ್ಯವಾಗಿ ಟಿಆರ್‌ ಪಿ ಗಾಗಿ ಈ ರೀತಿ ವೈಮನಸ್ಸು ಇರುವ ಜೋಡಿಗಳನ್ನು ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸುವುದು ಹೊಸ ವಿಚಾರವೇನೂ ಅಲ್ಲ.. ಆದರೆ ಸಂಗೀತಾ ಹಾಗೂ ವಿನಯ್‌ ನಡುವೆ ಮಾತ್ರ ಇದ್ಯಾಕೋ ಅಂದುಕೊಂಡಕ್ಕಿಂತ ಹೆಚ್ಚಾಗಿಯೇ ಜಗಳಗಳು ಆದಂತೆ ಕಾಣುತ್ತಿದೆ.. ಈ ಹಿಂದೆ ಮಹಾದೇವ ಧಾರಾವಾಹಿ ಮಾಡುವ ಸಮಯದಲ್ಲಿ ಸತಿ ಹಾಗೂ ಮಹಾದೇವನ ಜೋಡಿ ಇರುವವರೆಗೂ ಧಾರಾವಾಹಿ ದೊಡ್ಡ ಮಟ್ಟದಲ್ಲಿಯೇ ಯಶಸ್ಸು ಕಂಡಿತ್ತು.. ಆದರೆ ಸತಿಯ ಪಾತ್ರ ಮುಗಿಸಿ ನಂತರ ಪಾರ್ವತಿಯ ಪಾತ್ರಕ್ಕೆ ಸಂಗೀತಾ ಬದಲಾಗಿ ಹೊಸ ನಟಿಯ ಆಗಮನವಾಯಿತು.. ನಂತರದಲ್ಲಿ ಧಾರಾವಾಹಿಯ ರೇಟಿಂಗ್‌ ಕೂಡ ಕಡಿಮೆಯಾಯಿತು..

ಹೀಗೆ ಒಂದಷ್ಟು ತಿಂಗಳುಗಳ ಕಾಲ ಧಾರಾವಾಹಿ ನಡೆಸಿ ನಂತರ ಧಾರಾವಾಹಿಯನ್ನು ಮುಕ್ತಾಯ ಮಾಡುವಂತಾಯಿತು.. ಬಹುಶಃ ಸತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಗೀತಾ ಅವರೇ ಮುಂದುವರೆದಿದ್ದರೆ ಮಹಾದೇವ ಧಾರಾವಾಹಿ ಮತ್ತಷ್ಟು ವರ್ಷಗಳ ಕಾಲ ಒಳ್ಳೆಯ ರೇಟಿಂಗ್‌ ಪಡೆದುಕೊಂಡು ಮುಂದುವರೆಯುತ್ತಿತ್ತೋ ಏನೋ.. ಆದರೆ ಸತಿಯ ಪಾತ್ರದಿಂದ ಸಂಗೀತಾ ಅವರೇ ಹೊರ ನಡೆದರಾ ಅಥವಾ ಪಾತ್ರ ಮುಗಿಯಿತು ಎಂದು ಧಾರಾವಾಹಿ ತಂಡವೇ ಸಂಗೀತಾ ಅವರನ್ನು ಕೈ ಬಿಟ್ಟರಾ ತಿಳಿಯದು ಆದರೆ ಸಂಗೀತಾ ಹಾಗೂ ವಿನಯ ಗೌಡ ನಡುವೆ ಧಾರಾವಾಹಿ ಸಮಯದಿಂದಲೂ ಒಂದಷ್ಟು ಮನಸ್ತಾಪಗಳು ಇದಿದ್ದಂತೂ ಸತ್ಯ ಎನ್ನಾಲುತ್ತಿದೆ.. ಇನ್ನು ಈ ಬಗ್ಗೆ ನಿನ್ನೆ ವಿನಯ್‌ ಗೌಡ ಅವರೂ ಸಹ ಬಿಗ್‌ ಬಾಸ್‌ ಮನೆಯೊಳಗೆ ಮಾತನಾಡಿದ್ದಾರೆ.. ಆಗಲೇ ಹೇಳಿದಂತೆ ಬಿಗ್‌ ಬಾಸ್‌ ಮನೆಯೊಳಗೆ ಬಂದ ದಿನದಿಂದಲೂ ಇಬ್ಬರ ನಡುವೆ ಮನಸ್ತಾಪ ಕಾಣುತ್ತಿತ್ತು.. ಸಂಗೀತಾರನ್ನು ನಾಮಿನೇಟ್‌ ಮಾಡಿದಾಗ ವಿನಯ್‌ ನನ್ನನ್ನು ಪರ್ಸನಲ್‌ ಆಗಿ ಹಳೆಯ ವಿಚಾರಕ್ಕೆ ಟಾರ್ಗೆಟ್‌ ಮಾಡುತ್ತಿದ್ದಾನೆ ಎನ್ನುವ ಮಾತನ್ನು ಸಂಗೀತಾ ಆಡಿದ್ದರು.. ಆನಂತರ ಇಬ್ಬರ ನಡುವೆ ಮಾತಿಗೆ ಮಾತು ಸಹ ನಡೆದಿತ್ತು.. ಹಾಗೆಯೇ ಆಗಾಗ ಜಗಳಗಳು ಆಗಿತ್ತು.. ಮೊನ್ನೆ ಮತ್ತೆ ವಿನಯ್‌ ಅವರ ಏರು ಧ್ವನಿಯನ್ನು ಖಂಡಿಸಿದ್ದ ಸಂಗೀತಾ ನಿಮ್ಮ ಮಾತು ಮತ್ತೊನ್ನರನ್ನು ಹೆದರಿಸುವಂತಿದೆ ಎಂದೂ ಸಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಮತ್ತಷ್ಟು ಗಲಾಟೆಯಾಗಿತ್ತು..ಕೆಳಗಿನ ವೀಡಿಯೋ ನೋಡಿ..

ಇನ್ನು ಟಾಸ್ಕ್‌ ಒಂದರಲ್ಲಿ ಸೋತಿದ್ದ ಸಂಗೀತಾ ತಂಡದಲ್ಲಿ ಒಬ್ಬರಿಗೆ ಶಿಕ್ಷೆ ನೀಡಬೇಕಾದ್ದರಿಂದ ವಿನಯ್‌ ಅವರ ತಂಡ ಸಂಗೀತಾ ಅವರನ್ನೇ ಆಯ್ಕೆ ಮಾಡಿ ಅವರ ಮೇಲೆ ಸಗಣಿ ನೀರನ್ನು ಹಾಕಿತ್ತು.. ಇದರಿಂದ ಮನನೊಂದ ಸಂಗೀತಾ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ.. ಆಟವನ್ನು ಚೆನ್ನಾಗಿ ಆಡಿದ್ದರೂ ಸಹ ನನಗೆ ಶಿಕ್ಷೆ ನೀಡಿದ್ದಾರೆ.. ನಾನು ಈ ರೀತಿ ಶಿಕ್ಷೆ ತೆಗೆದುಕೊಳ್ಳೋಕಾ ಇಲ್ಲಗೆ ಬಂದಿದ್ದು.. ನಾನು ಬಿಗ್‌ ಬಾಸ್‌ ಮನೆಯಲ್ಲಿ ಇರೋದಿಲ್ಲಾ ಎಂದು ಕ್ಯಾಮಾರಾಗಳ ಮುಂಧೆ ಬಂದು ಹೇಳಿಕೆ ನೀಡಿದ್ದೂ ಉಂಟು.. ಇನ್ನು ಇದೇ ವಿಚಾರವನ್ನು ನಿನ್ನೆ ಭಾಗ್ಯಶ್ರೀ ಅವರು ವಿನಯ್‌ ಮುಂದೆ ಪ್ರಸ್ತಾಪಿಸಿ ಸಂಗೀತಾ ಡಿಪ್ರೆಷನ್‌ ಗೆ ಹೋಗ್ತಾ ಇದಾರೆ ಕ್ಯಾಮರಾ ಮುಂದೆ ಹೋಗಿ ಕೇಳ್ಕೋತಾ ಇದಾರೆ ನೀವು ಮಾತನಾಡಿ ಸರಿ ಮಾಡಿಕೊಳ್ಳಿ ಎಂದಿದ್ದರು.. ಇದೇ ಮಾತಿಗೆ ಕೋಪಗೊಂಡ ವಿನಯ್‌ ಗೌಡ ತೀರಾ ಕೆಟ್ಟ ಪದಗಳನ್ನು ಬಳಸಿ ಸಂಗೀತಾ ಅವರಿಗೆ ಬೈದರು.. ನನ್ನಿಂದ ಅವರ್ಯಾಕೆ ಡಿಪ್ರೆಷನ್‌ ಗೆ ಹೋಗ್ತಾರೆ? ಅವಳ ಯಾವಳು ಅಂತ ನಾನು ಹೋಗಿ ಮಾತನಾಡಬೇಕು ಎಂದರು.. ಅಷ್ಟೇ ಅಲ್ಲದೇ ಬಿಗ್‌ ಬಾಸ್‌ ಮನೆಗೆ ಬಂದ ಎರಡನೇ ದಿನವೂ ಸಹ ಅವಳೇನು ನ್ನ ಹೆಂಡತಿಯಾ ಪರ್ಸನಲ್‌ ಆಗಿ ತೆಗೆದುಕೊಳ್ಳೋಕೆ ಎನ್ನುವ ಮಾತುಗಳನ್ನು ಸಹ ಆಡಿದ್ದರು..

ಇನ್ನು ನಿನ್ನೆ ಮಾತು ಮುಂದುವರೆಸುತ್ತಾ ಯಾವಳೋ .. .. . .. .. . ಬಂದು ಇಲ್ಲಿ ಹುಚ್ಚಿ ತರ ಮಾತನಾಡಿದ್ರೆ ನನಿಗೆ ಯಾಕ್‌ ಬಂದ್‌ ಕೇಳ್ತೀರಾ.. ಅವಳು ನಗೆ ಏನೂ ಅಲ್ಲ.. ನನಗೆ ಅವಳಿಂದ ಏನೂ ಆಗಬೇಕಿಲ್ಲ.. ನಾನು ಕೆಟ್ಟ ಕೆಟ್ಟದಾಗಿ ಮಾತನಾಡಿ ಬಿಡ್ತೀನಿ.. ಯಾವಳೋ ಬಂದು ನಿನ್ನಿಂದ ನಿನ್ನಿಂದ ಅಂದರೆ ನನ್ನನ್ನ ಯಾಕ್‌ ಕೇಳ್ತೀರಾ.. ಅವಳ್‌ ಹಾಗ್‌ ಆಡಿದ್ರೆ ನಾನೇನ್‌ ಮಾಡಲಿ.. ಇವಾಗ ನಾನು ಹುಚ್ಚನ ತರ ಎಲ್ಲಾ ಕ್ಯಾಮರಾ ಮುಂದೆ ಹೋಗಿ ನಿಂತುಕೊಂಡಿದ್ರೆ ನೀವ್‌ ಹೋಗಿ ಅಲ್ಲಿ ಕೇಳ್ತೀರಾ.. ಯಾವತ್ತಾದ್ರೂ ಅವಳ ಹತ್ತಿರನಾದ್ರೂ ಹೋಗಿದ್ದೀನಾ.. ವಾಟ್ಸ್‌ ರಾಂಗ್‌ ವಿತ್‌ ಹರ್‌ ಮ್ಯಾನ್‌.. ಅವಳು ಯಾವಳು ಅಂತ ನಾನು ಯಾಕ್‌ ಕಾಳಜಿ ತೆಗೆದುಕೊಳ್ಳಲಿ.. ನನಿಗೆ ಏನ್‌ ಆಗಬೇಕು ಅವಳು ಯಾರು ಅಂದುಬಿಟ್ಟು.. ಇತರ ನಾಟಕಗಳನ್ನು ನಾನು ಇವತ್ತಿಂದ ನೋಡ್ತಾ ಇಲ್ಲಾ ಯಾವತ್ತಿಂದಾನೋ ನೋಡ್ತಾ ಇದ್ದೀನಿ..ಕೆಳಗಿನ ವೀಡಿಯೋ ನೋಡಿ..

ಅವಾಗಲಿಂದನೂ ನನ್ನನ್ನ ಬ್ಲೇಮ್‌ ಮಾಡೋದೆ ಅವಳು.. ಎಂದು ಈ ಹಿಂದೆ ಧಾರಾವಾಹಿಯ ಸಮಯದಲ್ಲಿಯೂ ವಿನಯ್‌ ಗೌಡ ಹಾಗೂ ಸಂಗೀತಾ ಅವರಿಗೆ ಮನಸ್ತಾಪ ಇದೆ ಎನ್ನುವಂತೆ ಮಾತನಾಡಿದರು.. ಕಾರ್ತಿಕ್‌ ಸಂಗೀತಾ ಹಿಂದೆ ಬಿದ್ದು ಅವನು ಅವಳು ಸುತ್ತಾಡಿಕೊಂಡು ಬಂದು ನನ್ನ ಹೆಸರು ಹೇಳಿದ್ರೆ ನಾನೇಕೆ ಅವರ ಬಗ್ಗೆ ಯೋಚನೆ ಮಾಡಲಿ.. ಅವಳು ನನ್ನ ಫ್ರೆಂಡೂ ಅಲ್ಲ ಏನೂ ಅಲ್ಲ ಎಂದರು.. ನಂತರ ಎಲ್ಲರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದಾಗ ನಾನು ಆ ರೀತಿ ಹೇಳಿಲ್ಲಾ ಎಂದು ಭಾಗ್ಯಶ್ರೀ ಅವರು ಮಾತನಾಡಿದ್ದು ಕೊನೆಗೆ ವಿನಯ್‌ ಗೌಡ ನನ್ನನ್ನು ವಿಲನ್‌ ನಂತೆ ಬಿಂಬಿಸ್ತಾ ಇದ್ದೀರಾ ಎಂದು ಹೇಳಿ ಮನೆಯವರನ್ನೆಲ್ಲಾ ಕರೆದು ನಾನು ಯಾರಿಗಾದರೂ ಏನಾದರೂ ಮಾಡಿದೇನಾ ಎಂದು ಕೇಳಿದರು.. ನನಗೆ ನನ್ನ ಮಗ ಮತ್ತು ಹೆಂಡತಿ ಮಾತ್ರ ಮುಖ್ಯ.. ನನ್ನನ್ನು ಅವರು ಈ ರೀತಿ ನೋಡದರೆ ನನ್ನ ಬೀಪ್‌ ಸೌಂಡ್‌ ಹಾಕುವಂತಹ ಮಾತುಗಳನ್ನು ಆಡಿ ರೀತಿ ಅಂದುಕೊಳ್ಳಲ್ವಾ ನನ್ನ ಮಗ.. ಎಂದು ಕಣ್ಣೀರಿಟ್ಟರು.. ಒಟ್ಟಿನಲ್ಲಿ ಎಂದೋ ಇದ್ದ ಮನಸ್ತಾಪಗಳು ಇಂದು ಬಿಗ್‌ ಬಾಸ್‌ ಮನೆಯೊಳಗೆ ಭುಗಿಲೆದ್ದಿದ್ದು ಈ ಇಬ್ಬರು ಹಳೆಯ ಕತೆಗಳನ್ನೆಲ್ಲಾ ಮರೆತು ಮತ್ತೆ ಸ್ನೇಹಿತರಾಗುವರಾ ಅಥವಾ ಹೀಗೆ ಬಿಗ್‌ ಬಾಸ್‌ ಮನೆಯಲ್ಲಿ ಕೊನೆವರೆಗೂ ಉಳಿಯುವರಾ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.