ನನ್ನ ಮಗನ ಸಂಬಳ ಎಷ್ಟು ಗೊತ್ತಾ? ಮಗನ ಬಗ್ಗೆ ಸತ್ಯ ತಿಳಿಸಿದ ವಿನೋದ್‌ ರಾಜ್..

0 views

ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ. ತಾಯಿಯೇ ಎಲ್ಲಾ ಎಂದುಕೊಂಡಿದ್ದ ಮಗ ನೀಗ ತಾಯಿಯ ಮುಖವನ್ನು ಇನ್ನೆಂದೂ ನೋಡಲಾಗದು ಎಂದು ಕಣ್ಣೀರಿಡುತ್ತಿದ್ದಾರೆ. ನಿನ್ನೆ ಸೋಲದೇವನಹಳ್ಳಿಯ ತೋಟದಲ್ಲಿಯೇ ಲೀಲಾವತಿ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಇಂದಿಗೆ ಲೀಲಾವತಿ ಅವರು ಅಗಲಿ ಮೂರು ದಿನಗಳಾಗಿದ್ದು ಇಂದು ಹಾಲು ತುಪ್ಪದ ಕಾರ್ಯವನ್ನು ಸಹ ವಿನೋದ್‌ ರಾಜ್‌ ನೆರವೇರಿಸುತ್ತಿದ್ದಾರೆ.. ಇದೇ ಸಮಯದಲ್ಲಿ ವಿನೋದ್‌ ರಾಜ್‌ ಅವರು ತಮ್ಮ ಮಗನ ಬಗ್ಗೆ ಮೊದಲ ಬಾರಿಗೆ ಸತ್ಯ ತಿಳಿಸಿದ್ದು.. ಆತ ಯಾರು ಎಲ್ಲಿದ್ದಾನೆ ತಮ್ಮಿಂದ ಯಾಕೆ ದೂರ ಇದ್ದಾನೆ ಏನು ಕೆಲಸ ಮಾಡುತ್ತಿದ್ದಾನೆ.. ಆತನಿಗೆ ಎಷ್ಟು ಸಂಬಳ.. ಎಲ್ಲವನ್ನೂ ಸಹ ಜನರಿಗೆ ತಿಳಿಸಿದ್ದಾರೆ..

ಹೌದು ವಿನೋದ್‌ ರಾಜ್‌ ಬಹುಶಃ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ.. ಆದರೆ ಒಂದಷ್ಟು ಜನರ ಹಿಂಸೆ ತಾಳಲಾರದೇ ಚಿತ್ರರಂಗವನ್ನೇ ತೊರೆದು ತಾಯಿಯ ಜೊತೆ ತಾಯಿಗಾಗಿ ಸಾರ್ಥಕ ಬದುಕನ್ನು ಬದುಕಿದ ವ್ಯಕ್ತಿ ಎಂದರೆ ತಪ್ಪಾಗಲಾರದು. ಹೌದು ಅತ್ತ ಲೀಲಾವತಿ ಅವರು ತನ್ನೊಳೊಗೆ ಒಂದಷ್ಟು ವಿಚಾರಗಳನ್ನು ಹುದುಗಿಸಿಕೊಂಡೇ ಜೀವಿಸಿ ಕೊನೆಗೆ ತನ್ನೊಳೊಗೆ ಇಟ್ಟುಕೊಂಡು ಮಣ್ಣಲ್ಲಿ ಮಣ್ಣಾದ ಒಂದು ಜೀವ ಎಂದರೆ ಅದು ಲೀಲಾವತಿ ಅವರು.. ಯಾರ ಮುಂದೆಯೂ ಎಂದೂ ಕೈಚಾಚದೇ ಬದುಕಬೇಕು ಎನ್ನುತ್ತಿದ್ದ ಲೀಲಾವತಿ ಅವರು ಇದ್ದಷ್ಟು ದಿನ ತಮ್ಮ ಮಾತಿನಂತೆಯೇ ಬದುಕಿ ತೋರಿಸಿ ಮಗನಿಗೂ ಅದೇ ದಾರಿ ತೋರಿಸಿ ಹೋದವರು.. ಲೀಲಾವತಿ ಅವರು ಚಿಕ್ಕ ವಯಸ್ಸಿಗೆ ಈ ಬಣ್ಣದ ಲೋಕಕ್ಕೆ ಕಾಳಿಟ್ಟವರು. ಶುರುವಿನಲ್ಲಿ ರಂಗಭೂಮಿಗೆ ಬಂದ ಲೀಲಾವತಿ ಅವರು ಅನೇಕ ನಾಟಕ ಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡರು. ನಂತರ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿ ಕನ್ನಡದ ಎಲ್ಲಾ ದಿಗ್ಗಜ ಕಲಾವಿದರ ಜೊತೆಯೂ ತೆರೆ ಹಂಚಿಕೊಂಡು ಕೊನೆಗೆ ಪೋಷಕ ಪಾತ್ರಗಳಲ್ಲಿ ತಾಯಿಯ ಪಾತ್ರಗಳಲ್ಲಿಯೂ ಕಾಣಿಸಿಕೊಂಡು ಸುಮಾರು ಆರನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಲೀಲಾವತಿ ಅವರು ನಂತರ ಅದ್ಯಾಕೋ ಚಿತ್ರರಂಗ ಬೇಡವೆನಿಸಿ ದೂರ ಸರಿದರು.. ಮಗನ ಜೊತೆ ಜೀವನ ಸಾಗಿಸಲು ಮುಂದಾದ ಲೀಲಾವತಿ ಅವರ ವ್ಯಯಕ್ತಿಕ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಗಳು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದು ಹೋದವು.

ಇನ್ನು ಲೀಲಾವತಿ ಅವರು ತಾವು ದುಡಿಯುತ್ತಿದ್ದ ಸಮಯದಲ್ಲಿಯೇ ತಮಗೆ ಬಂದ ಹಣವನ್ನು ಎಂದೂ ದುಂದು ವೆಚ್ಛ ಮಾಡದೇ ಮುಂದಿನ ಜೀವನಕ್ಕಾಗಿ ಚೆನ್ನೈ ನಲ್ಲಿ ಹಾಗೂ ಬೆಂಗಳೂರಿನ ಬಳಿ ಒಂದಷ್ಟು ಜಮೀನನ್ನು ತೆಗೆದರು.. ಮಗನ ಜೊತೆ ಮೊದಲು ಚೆನ್ನೈನಲ್ಲಿ ಇದ್ದು ಅಲ್ಲಿಯೇ ಒಂದಷ್ಟು ವರ್ಷಗಳನ್ನು ಕಳೆದರು.. ಸ್ವಲ್ಪ ವರ್ಷಗಳ ನಂತರ ತಮಗೆ ಬದುಕು ಕೊಟ್ಟ ಕರ್ನಾಟಕದಲ್ಲಿಯೇ ತಾವು ಇರಬೇಕೆಂದು ಬಯಸಿ ಸೋಲದೇವನಹಳ್ಳಿಯ ತೋಟದಲ್ಲಿ ತಾಔಉ ವಾಸಿಸಲು ಶುರು ಮಾಡಿದರು.. ಪಾಳು ಭೂಮಿಯಂತಿದ್ದ ಜಾಗವನ್ನು ಮೊದಲು ಹೂ ಬೆಳೆದು ಹೂವಿನ ಸ್ವರ್ಗ ದಂತೆ ಮಾಡಿದರು.. ನಂತರ ಆ ಜಾಗವನ್ನು ಸಂಪೂರ್ಣವಾಗಿ ತೋಟವಾಗಿ ಮಾಡಿ ಅದೇ ತೋಟದಲ್ಲಿ ತಮ್ಮ ಸಂಪೂರ್ಣ ಜೀವನವನ್ನು ಮಗನ ಜೊತೆ ಕಳೆದರು.. ತಮ್ಮ ಜೀವನವನ್ನಷ್ಟೇ ನೋಡಿಕೊಳ್ಳುವುದು ಮಾತ್ರವಲ್ಲ ತಾವಿದ್ದ ಗ್ರಾಮಕ್ಕೂ ಲೀಲಾವತಿ ಅವರು ಅಮ್ಮನಾದರು.. ಕೆಲವರು ತಮಗೆ ಎಷ್ಟೇ ನೋವು ಕೊಟ್ಟರು ಸಹ ತಾವು ಮಾತ್ರ ಅಂಜದೆ ತಾವಿದ್ದ ಸೋಲದೇವನಹಳ್ಳಿಗೆ ಆಸ್ಪತ್ರೆ ಕಟ್ಟಿಕೊಟ್ಟರು.. ರಸ್ತೆ ಇಲ್ಲದ ಊರಿಗೆ ತಾರ್‌ ರಸ್ತೆ ಮಾಡಿಸಿದರು.. ಕೊರೋನಾ ಸಮಯದಲ್ಲಿ ಸಂಪೂರ್ಣ ಗ್ರಾಮಕ್ಕೆ ಆಗಾಗ ಸ್ಯಾನಿಟೈಸ್‌ ಮಾಡಿಸಿ ಊರಿನ ಜನರು ಆರೋಗ್ಯದಿಂದ ಇರುವಂತೆ ನೋಡಿಕೊಂಡರು..

ಇತ್ತ ಚಿತ್ರರಂಗದಿಂದ ತಾವು ದೂರಾದರೂ ಸಹ ಚಿತ್ರರಂಗವನ್ನು ಮರೆಯದ ಲೀಲಾವತಿ ಅವರು ಕನ್ನಡ ಚಿತ್ರರಂಗದ ಜೂನಿಯರ್‌ ಕಲಾವಿದರುಗಳ ಕಷ್ಟಕ್ಕೆ ಸ್ಪಂದಿಸಿ ಕೊರೋನಾ ಸಮಯದಲ್ಲಿ ನೂರಾರು ಕಲಾವಿದರು ಜೀವನಕ್ಕೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರು..  ಇನ್ನು ಚಿತ್ರರಂಗದ ಆಗಿನ ಕಲಾವಿದರುಗಳೆಲ್ಲರೂ ಸಹ ಜಯಂತಿ ಅವರು ಶೃತಿ ಅವರು ಸುಧಾರಾಣಿ ಅವರು ದೊಡ್ಡಣ್ಣ ಅವರು ಮಾಳವಿಕ ಅವಿನಾಶ್‌ ಅವರು ಪ್ರಮಿಳಾ ಸುಂದರ್‌ ಅವರು ಸುಂದರ್‌ ರಾಜ್‌ ಅವರನ್ನು ಸೇರಿದಂತೆ ಅನೇಕ ಕಲಾವಿದರುಗಳುನ ಆಗಾಗ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಅಲ್ಲಿಯೇ ಸಾಕಷ್ಟು ಸಮಯ ಕಳೆದು ಆ ಹಿರಿಯ ಜೀವಕ್ಕೆ ಸಂತೋಷ ನೀಡಿ ಬರುತ್ತಿದ್ದರು.. ಮನೆಗೆ ನೂರು ಮಂದಿಯೇ ತಮ್ಮನ್ನು ನೋಡಲು ಬರಲಿ ಅವರಿಗೆಲ್ಲಾ ಅತಿಥಿ ಸತ್ಕಾರ ಮಾಡಿ ವಿಧ ವಿಧವಾದ ಅಡುಗೆ ಮಾಡಿಸಿ ಬಡಿಸುತ್ತಿದ್ದ ಅನ್ನಪೂರ್ಣೇಶ್ವರಿ ಲೀಲಾವತಿ ಅವರು.. ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸುತಿತ್ತು.. ಇತ್ತ ಹಾಸಿಗೆ ಹಿಡಿದ ಲೀಲಾವತಿ ಅವರನ್ನು ಮುಖ್ಯಮಂತ್ರಿಗಳಿಂದ ಹಿಡಿದು ಚುತ್ರರಂಗದ ಶಿವಣ್ಣ, ದರ್ಶನ್‌ ಅವರನ್ನು ಸೇರಿದಂತೆ ಸಾಕಷ್ಟು ಸ್ಟಾರ್‌ ಕಲಾವಿದರುಗಳು ಲೀಲಾವತಿ ಅವರ ಮನೆಗೆ ಆಗಮಿಸಿ ಆರೋಗ್ಯವನ್ನು ವಿಚಾರಿಸಿ ಅವರನ್ನು ನೋಡಿಕೊಂಡು ಹೋಗಿದ್ದರು.

ಇನ್ನು ಕೆಲ ದಿನಗಳ ಹಿಂದೆ ಇದ್ದಕಿದ್ದ ಹಾಗೆ ಲೀಲಾವತಿ ಅವರು ಚಿಕ್ಕ ಹುಡುಗನೊಬ್ಬನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕುಟುಂಬ ಸಮೇತ ತೆಗೆಸಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.. ಆ ಹುಡುಗ ವಿನೋದ್‌ ರಾಜ್‌ ಅವರ ಮಗ, ಪಕ್ಕದಲಲಿ ನಿಂತಿದ್ದ ಮಹಿಳೆ ವಿನೋದ್‌ ರಾಜ್‌ ಅವರ ಪತ್ನಿ ಎಂದು ಸುದ್ದಿ ಹಬ್ಬಿತು. ಆದರೆ ಅಲ್ಲಿಯವರೆಗೂ ವಿನೋದ್‌ ರಾಜ್‌ ಅವರು ಮದುವೆ ಆಗಿರುವ ವಿಚಾರ ಎಲ್ಲಿಯೂ ತಿಳಿಯದ ಕಾರಣ ಆ ಸುದ್ದಿ ಒಂದು ರೀತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಲು ಶುರುವಾಯಿತು. ವಿನೋದ್‌ ರಾಜ್‌ ಅವರು ಮದುವೆಯಾಗಿರುವ ವಿಚಾರವನ್ನು ಯಾಕೆ ಮುಚ್ಚಿಟ್ಟಿದ್ದಾರೆ.. ಹೆಂಡತಿ ಮಗ ಎಲ್ಲಿದ್ದಾರೆ.. ಯಾಕೆ ತಮ್ಮ ಜೊತೆ ಇಲ್ಲ ಎಂಬ ಎಲ್ಲಾ ವಿಚಾರಗಳು ಪ್ರಶ್ನೆಗಳ ಮೂಲಕ ಕೇಳಿಬಂದವು. ಇದೊಂದು ರೀತಿ ವಿನೋದ್‌ ರಾಜ್‌ ಅವರು ಏನೋ ದೊಡ್ಡ ತಪ್ಪು ಮಾಡಿಬಿಟ್ಟಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು.. ಆಗಲು ಸಹ ಮಗನ ಬಗ್ಗೆ ಮಾತನಾಡಲು ತಾಯಿಯೇ ಬರಬೇಕಾಯಿತು.. ಆ ಸಮಯದಲ್ಲಿ ತಾಯಿ ಲೀಲಾವತಿ ಅವರೇ ಮಾದ್ಯಮಗಳ ಜೊತೆ ಮಾತನಾಡಿ.. ಅವನೇನು ಅಪರಾಧ ಮಾಡಿದ್ದಾನೆ ಅಂತ ಈ ರೀತಿ ಅವನಿಗೆ ನೋವು ಕೊಡುತ್ತಿದ್ದೀರಾ.. ಹೌದು ಅವನು ಮದುವೆ ಆಗಿದ್ದರೆ ಏನು ತಪ್ಪು.. ಅದರಿಂದ ಯಾರಿಗಾದರೂ ನೋವಿದೆಯಾ.. ಅದು ಅವನ ಬವ್ಯಯಕ್ತಿಕ ವಿಚಾರ.. ಆ ವಿಚಾರವನ್ನು ಯಾಕೆ ದೊಡ್ಡದು ಮಾಡಿ ಅವನೇನೋ ಅಪರಾಧ ಮಾಡಿದ್ದಾನೆ ಎಂದು ಬಿಂಬಿಸುತ್ತದ್ದೀರಾ ಎಂದು ಆ ಸಮಯದಲ್ಲಿ ಮಾತನಾಡಿದವರ ಬಾಯಿ ಮುಚ್ಚಿಸಿದ್ದರು.. ಇನ್ನು ಈಗ ಲೀಲಾವತಿ ಅವರು ಅಗಲಿದ ಸಮಯದಲ್ಲಿ ವಿನೋದ್‌ ರಾಜ್‌ ಅವರ ಪತ್ನಿ ಹಾಗೂ ಮಗ ಇಬ್ಬರೂ ಆಗಮಿಸಿ ಅಜ್ಜಿಯ ಅಂತಿಮ ದರ್ಶನ ಪಡೆದು ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಿದ್ದಾರೆ. ಎರಡು ದಿನ ಪೂರ್ತಿ ತಂದೆಯ ಪಕ್ಕದಲ್ಲಿಯೇ ಕುಳಿತ್ತಿದ್ದ ಮಗ ಅಜ್ಜಿಯ ಅಗಲಿಕೆಗೆ ಕಣ್ಣೀರಿಟ್ಟಿದ್ದಾರೆ.. ಇನ್ನು ಎಲ್ಲಾ ಕಾರ್ಯಗಳು ಮುಗಿದ ಬಳಿಕ ರಾತ್ರಿ ಮಾದ್ಯಮಗಳ ಜೊತೆ ಮಾತನಾಡಿದ ವಿನೋದ್‌ ರಾಜ್‌ ಅವರು ತಮ್ಮ ಮಗನ ಬಗ್ಗೆಯೂ ಮಾತನಾಡಿದ್ದಾರೆ..

ಇನ್ನು ಮುಂದೆ ಅಮ್ಮನನ್ನು ನೋಡಲು ಸಾಧ್ಯವಾಗೋದಿಲ್ಲ ಅನ್ನೋ ನೋವು ಮಾತ್ರ ನನ್ನ ಜೊತೆ ಸದಾ ಇದ್ದೇ ಇರುತ್ತದೆ ಎಂದು ನೋವು ಹಂಚಿಕೊಂಡ ವಿನೋದ್‌ ರಾಜ್‌ ಅವರು ನನ್ನ ತಾಯಿ ನನಗೆ ಬದುಕುವುದನ್ನು ಕಲಿಸಿದ್ದಾರೆ ಅದರಂತೆ ಅವರ ನೆನಪಿನಲ್ಲಿಯೇ ಇಲ್ಲೇ ಜೀವನ ಸಾಗಿಸುವೆ ಎಂದಿದ್ದಾರೆ. ಇದೇ ಸಮಯದಲ್ಲಿ ಮಹ ಹಾಗೂ ಹೆಂಡತಿ ಬಗ್ಗೆ ಮಾತನಾಡಿ ಅವನಿಗೆ ಈ ಸಿನಿಮಾ ರಂಗ ಬೇಡವೆಂದು ಅವನನ್ನು ದೂರ ಇಟ್ಟಿದ್ದೆವು.. ಎಲ್ಲಿ ಅಜ್ಜಿ ಹಾಗೂ ಅಪ್ಪನ ರೀತಿ ಆಗಿಬಿಡ್ತಾನೋ ಅನ್ನೋ ಕಾರಣಕ್ಕೆ ಅವನ್ನು ತಾಯಿಯ ಜೊತೆ ಚೆನ್ನೈ ನಲ್ಲಿ ಇರಿಸಿದ್ದವು.. ಅವನು ಅಲ್ಲಿಯೇ ವಿಧ್ಯಾಭ್ಯಾಸ ಪಡೆದು ಚೆನ್ನಾಗಿ ಓದಿಕೊಂಡಿದ್ದಾನೆ.. ಸಿನಿಮಾಗೆ ಬರೋದು ಬೇಡ ಅನ್ನೋದು ನನಗೂ ನನ್ನ ತಾಯಿಗೂ ಇತ್ತು.. ಈಗ ಅವನು ಕೆಲಸಕ್ಕೂ ಸೇರಿಕೊಂಡಿದ್ದಾನೆ.. ಯು ಕೆ ಬೇಸ್ಡ್‌ ಕಂಪನಿ ಒಂದಕ್ಕೆ ಕೆಲಸಕ್ಕೆ ಹೋಗ್ತಾನೆ.. ಅವನಿಗೂ ಐವತ್ತು ಸಾವಿರ ರೂಪಾಯಿ ಸಂಬಳ ಬರುತ್ತಿದೆ.. ಅವನು ಚೆನ್ನಾಗಿದ್ದಾನೆ.. ಅವನ ವಿಧ್ಯಾಭ್ಯಾಸದ ಕಾರಣಕ್ಕಷ್ಟೆ ಅವನ್ನು ನಾವು ಚೆನ್ನೈ ನಲ್ಲಿ ಇಟ್ಟಿದ್ದೆವು ಎಂದಿದ್ದಾರೆ.. ಅಷ್ಟೇ ಅಲ್ಲದೇ ಮಗನಿಗೆ ಯಾವಾಗಲೂ ಕನ್ನಡವನ್ನು ಕಲಿ ಅಂತ ಹೇಳ್ತಿರ್ತೇನೆ.. ಕನ್ನಡ ನಮ್ಮ ತಾಯಿ ಭಾಷೆ ಅದನ್ನು ನಾವು ಕಲಿಯಲೇ ಬೇಕು ಅಂತ ಹೇಳ್ತಾ ಇರ್ತೇನೆ.. ಅವನು ಸ್ವಲ್ಪ ತಮಿಳು ಮಿಕ್ಸ್‌ ಮಾಡಿ ಮಾತನಾಡ್ತಾನೆ ಎಂದು ಮಗನ ಬಗ್ಗೆ ಹೆಮ್ಮೆ ಇಂದಲೇ ಹೇಳಿಕೊಂಡಿದ್ದಾರೆ..