ಕಾಡಾನೆಯಿಂದ ಅರ್ಜುನ ಸಾಯಲಿಲ್ಲ.. ಅಳುತ್ತಲೇ ಸತ್ಯ ಬಿಚ್ಚಿಟ್ಟ ಮಾವುತ.. ನಿಜಕ್ಕೂ ಶಾಕಿಂಗ್..

0 views

ಅರ್ಜುನ.. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಎಂಟು ಬಾರಿ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿ ಮೈಸೂರಿಗರು ಮಾತ್ರವಲ್ಲ ನಾಡಿನ ಎಲ್ಲಾ ಜನರಿಗೂ ಅಚ್ಚುಮೆಚ್ಚಾಗಿದ್ದ ಅರ್ಜುನ ಆನೆ ನಿನ್ನೆ ಹಾಸನದ ಅರಣ್ಯ ಕಾರ್ಯಚರಣೆಯ ವೇಳೆ ಆನೆ ದಾಳಿಗೆ ಅಸು ನೀಗಿರುವ ಸುದ್ದಿ ನಿನ್ನೆ ಎಲ್ಲರನ್ನೂ ಮನಕಲಕುವಂತೆ ಮಾಡಿತು.. ಶುರುವಿನಲ್ಲಿ ಕಾಡಾನೆ ಒಂಟಿ ಸಲಗದ ದಾಳಿಯಿಂದ ಅರ್ಜುನ ಅಸುನೀಗಿದ ಎಂದುಕೊಂಡವರಿಗೆ ಇದೀಗ ನಿಜಕ್ಕೂ ಬೆಚ್ಚಿಬೀಳಿಸುವ ಸತ್ಯ ಹೊರ ಬಿದ್ದಿದೆ.. ಹೌದು ಅಸಲಿಗೆ ಅರ್ಜುನ ಅಸುನೀಗಲು ಕಾಡಾನೆ ಕಾರಣವಲ್ಲ.. ಹೌದು ನಿನ್ನೆ ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಸಮೀಪದ ದಬ್ಬಹಳ್ಳಿ ಕಾಡಿನಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು.. ಆ ಕಾರ್ಯಾಚರಣೆಗಾಗಿ ಸೋಮವಾರ ಅರ್ಜುನ ಸೇರಿದಂತೆ ನಾಲ್ಕು ಸಾಕಾನೆಗಳ ತಂಡವನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಿದ್ದರು.. ಪುಂಡಾನೆಗೆ ರೇಡಿಯೋ ಕಾಲರ್ ಅನ್ನು ಅಳವಡಿಸಬೇಕಿತ್ತು.. ಅದಕ್ಕಾಗಿ ಕಾಡನೆಗೆ ಅರವಳಿಕೆ ನೀಡುವ ಪ್ರಯತ್ನ ನಡೆದಿತ್ತು.. ಆ ಸಮಯದಲ್ಲಿ ಒಂಟಿ ಸಲಗ ಅರ್ಜುನನ ಮೇಲೆ ಎರಗಿ ಬಂದಿದ್ದು ಇಬ್ಬರ ನಡುವೆಯೂ ಕಾದಾಟ ನಡೆದಿತ್ತು.. ಈ ಸಮಯದಲ್ಲಿ ಅರ್ಜುನನ ಹೊಟ್ಟೆಯ ಭಾಗಕ್ಕೆ ಒಂಟಿ ಸಲಗ ತಿವಿದು ತೀವ್ರ ರಕ್ತಸ್ರಾವವಾಗಿ ಆನೆ ಅರ್ಜುನ ಅಸುನೀಗಿತು ಎಂಬ ಸುದ್ದಿ ನಿನ್ನೆ ಹೊರ ಬಿತ್ತು.. ಈ ವಿಚಾರವನ್ನು ಕೇಳುತ್ತಲೇ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲಾ ರಾಜಕಾರಣಿಗಳು.. ದರ್ಶನ್ ಅವರನ್ನು ಸೇರಿದಂತೆ ಎಲ್ಲಾ ಸ್ಟಾರ್ ಕಲಾವಿದರುಗಳು ಸಂತಾಪ ಸೂಚಿಸಿ ಅರ್ಜುನನ ಅಗಲಿಕೆಗೆ ಕಂಬನಿ ಮಿಡಿದಿದ್ದರು.. ಆದರೆ ಇಂದು ಅರ್ಜುನನ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸುವ ವೇಳೆ ಮಾವುತ ಮಿನು ಅಳುತ್ತಲೇ ಅರ್ಜುನನ ಅಗಲಿಕೆಗೆ ನಿಜವಾದ ಕಾರಣ ಏನೆಂಬುದನ್ನು ತಿಳಿಸಿದ್ದಾನೆ..

ಹೌದು ಅರ್ಜುನ ಆನೆಯನ್ನು ಸಾಕಿ ಸಲುಹಿ ತನ್ನ ಆಯುಷ್ಯದ ಬಹುತೇಕ ಸಮಯ ಅರ್ಜುನನ ಜೊತೆಯೇ ಮಾವುತ ವಿನು ಕಳೆದಿದ್ದನು.. ಅವರಿಬ್ಬರ ಸಂಬಂಶ ತಾಯಿ ಮಗನ ಸಂಬಂಧದಂತಿತ್ತು.. ಆದರೆ ಈಗ ಮಗನನ್ನು ಕಳೆದುಕೊಂಡಷ್ಟೇ ವಿನು ರೋಧಿಸುತ್ತಿರುವುದು ನಿಜಕ್ಕೂ ಮನಕಲಕುವಂತಿದೆ.. ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಕಳೆದ ಎರಡು ದಶಕಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.. ವಿನು ಸದಾ ಆನೆಯ ಜೊತೆಯೇ ಇದ್ದು ಅದರ ಪಾಲನೆ ಪೋಷಣೆ ಮಾಡುತ್ತಿದ್ದರು.. ಆದರೀಗ ವಿನು ಮನೆಯಲ್ಲಿ ಒಂದು ರೀತಿಸೂತಕದ ಛಾಯೆ ಮೂಡಿದ್ದು ವಿನುವಿನ ಹೆಂಡತಿ ಮಕ್ಕಳು ತಂದೆ ಎಲ್ಲರೂ ಸಹ ಕಣ್ಣೀರಿಡುತ್ತಿದ್ದಾರೆ..

ಇತ್ತ ಅರ್ಜುನನಿಗೆ ಸಕಲ ಸರ್ಕಾರಿ ಗೌರವದ ಜೊತೆಗೆ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದು ಅದೇ ಜಾಗದಲ್ಲಿ ವಿನು ಅಳುವ ಸಮಯದಲ್ಲಿ ಸತ್ಯ ಹೊರ ಬಿದ್ದಿದೆ.‌ ಹೌದು ಅರ್ಜುನನ ಅಗಲಿಕೆಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.. ಕಣ್ಣೀರು ಹಾಕುತ್ತಾ ವಿನು ಆಡಿದ ಮಾತುಗಳೀಗ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.. ನಾನು ಆನೆಯ ಮೇಲೆ ಕುಳಿತಿದ್ದಾಗಲೇ ಕೋವಿಯಿಂದಲೇ ಏಟು ಬಿತ್ತು.. ಕಾಡಾನೆಗೆ ನೀಡಬೇಕಿದ್ದ ಅರವಳಿಕೆ ನಮ್ಮ ಅರ್ಜುನನಿಗೆ ಬಿತ್ತು.. ಅರಣ್ಯ ಸಿಬ್ಬಂದಿಯೇ ಅರ್ಜುನನ ಕಾಲಿಗೆ ಅರವಳಿಕೆ ಕೊಟ್ಟು ಬಿಟ್ಟರು.. ನಾನು ಕೂಡಲೇ ಕೆಳಗೆ ಇಳಿದು ಬಂದೆ.. ಅರ್ಜುನ ತಕ್ಷಣ ಸುಸ್ತಾದ.. ಅತ್ತ ಮದವೇರಿದ ಆನೆ ಬಂದು ಅರ್ಜುನನ ಮೇಲೆ ದಾಳೆ ನಡೆಸಿತು.. ನನ್ನ ಅರ್ಜುನ ಹೋಗಿಬಿಟ್ಟ ಎಂದು ಕಣ್ಣೀರಿಟ್ಟಿದ್ದಾನೆ.. ಆ ಸ್ಥಳದಲ್ಲಿ ಇಬ್ಬರು ವೈದ್ಯರಿದ್ದರು ಎನ್ನಲಾಗುತ್ತಿದೆ.. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅರ್ಜುನ ತನ್ನ ಜೀವ ಕಳೆದುಕೊಳ್ಳುವಂತಾಯಿತು ಎಂದು ಸ್ಥಳೀಯರು ಆಕ್ರೋಶವನ್ನು ಹೊರ ಹಾಕಿದ್ದಾರೆ‌.. ಅತ್ತ ಅಧಿವೇಶನ ನಡೆಯುವ ಸುವರ್ಣ ಸೌಧದಲ್ಲಿ ಅರ್ಜುನನಿಗೆ ಒಂದು ನಿಮಿಷ ಸಂತಾಪ ಸೂಚಿಸಿದ್ದಾರೆ.. ಇತ್ತ ತನ್ನ ತಪ್ಪು ಮುಚ್ಚಿಕೊಳ್ಳೋದಕ್ಕೆ ಅರಣ್ಯ ಇಲಾಖೆ ಪ್ರಯತ್ನ ಪಡುತ್ತಿದೆ ಎಂದು ತಿಳಿದುಬಂದಿದೆ.. ಕೆಳಗಿನ ವೀಡಿಯೋ ನೋಡಿ..

ಮೈಸೂರು ಅಂಬಾರಿ ಹೊತ್ತ ಆನೆ ಆಗಿರೋದ್ರಿಂದ ಅರಮನೆಯ ಪುರೋಹಿತರಿಂದ ಪೂಜೆ ನೆರವೇರಿಸಲಾಗುತ್ತಿದೆ.. ಪ್ರಹ್ಲಾದ್ ಅವರನ್ನು ಸೇರಿದಂತೆ ಕೆಲ ಪುರೋಹಿತರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.. ಕಾವಾಡಿಗಳು ಮಾವುತರು ಎಲ್ಲರೂ ಆಗಮಿಸಿ ಅರ್ಜುನನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.. ಆದರೆ ಮಾವುತ ವಿನು ಮಾತ್ರ ನನ್ನ ಅರ್ಜುನ ಸತ್ತಿಲ್ಲ ಅವನನ್ನು ಬದುಕಿಸಿಕೊಡಿ.. ಇಲ್ಲವಾದರೆ ನನ್ನನ್ನೂ ಅವನ ಜೊತೆಯೇ ಮಣ್ಣು ಮಾಡಿ ಎಂದು ಅಂಗಲಾಚುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ..

ಮನುಷ್ಯರನ್ನು ನಂಬಿ ಕಾರ್ಯಾಚರಣೆಗೆ ಇಳಿದ ಅರ್ಜುನನಿಗೆ ಮನುಷ್ಯರಿಂದಲೇ ದ್ರೋಹವಾಯಿತಾ.. ಒಂಟಿ ಸಲಗಕ್ಕೆ ನೀಡಬೇಕಾದ ಅರವಳಿಕೆ ಅರ್ಜುನನ ಕಾಲಿಗೆ ಬಿದ್ದು ಅರ್ಜುನ ಸುಸ್ತಾಗಿ ಬಿದ್ದ.. ಅತ್ತ ಸುಸ್ತಾದ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿತು.. ಅರವಳಿಕೆ ನೀಡದೇ ಇದ್ದಿದ್ದರೆ ಅರ್ಜುನ ಕೆಳಗೆ ಬೀಳುವ ಮಾತೇ ಇರಲಿಲ್ಲ.. ಅರ್ಜುನನ ಅಗಲಿಕೆಗೆ ಕಾರಣವಾದ ಸಿಬ್ಬಂದಿಗೆ ಸರಿಯಾದ ಶಿಕ್ಷೆಯಾಗಲಿ.. ಪ್ರಾಣಿಯಾಗಲಿ ಮನುಷ್ಯನಾಗಲಿ ಅವುಗಳೂ ಜೀವವೇ.. ಇನ್ನೂ ಹೇಳಬೇಕೆಂದರೆ ಅರ್ಜುನ ಇದ್ದಷ್ಟು ದಿವಸ ನಾಡಿಗೆ ಸೇವೆ ಸಲ್ಲಿಸಿದವನೇ ಅವನಿಗೆ ಈ ರೀತಿ ದ್ರೋಹವಾಗಿದ್ದು ನಿಜಕ್ಕೂ ಖಂಡನೀಯ.. ಇನ್ನು ಈ ಬಗ್ಗೆ ಪರಿಸರ ತಜ್ಞರು ಕೂಡ ಮಾತನಾಡಿ ಮದ ಬಂದಂತಹ ಆನೆ ಇರುವ ಕಾಡಿಗೆ ಸಾಕಾನೆಯನ್ನು ಬಿಡುವ ಹಾಗೇ ಇಲ್ಲ.. ಇವರುಗಳು ಸರಿಯಾಗಿ ಟ್ರ್ಯಾಕಿಂಗ್ ಮಾಡಿಲ್ಲ.. ಒಂಟಿ ಸಲಗ ಇದ್ದರೆ ಅದರ ಕಿವಿಯಲ್ಲಿ ದ್ರವ ಸೋರುತ್ತಿದ್ದರೆ ಆ ಜಾಗಕ್ಕೆ ಯಾವ ಆನೆಯನ್ನು ಕಳುಹಿಸುವ ಹಾಗಿಲ್ಲ.. ಮಿದಲು ಇವರುಗಳು ಅದನ್ನು ಟ್ರ್ಯಾಕ್ ಮಾಡಿ ನಂತರ ಸಾಕಾನೆಗಳನ್ನು ಬಿಡಬೇಕಿತ್ತು.. ಅದ್ಯಾವುದನ್ನೂ ಮಾಡದೇ ಏಕಾಏಕಿ ಅರ್ಜುನನ್ನು ಬಿಟ್ಟು ಈ ರೀತಿ ಕೊಂದದ್ದು ಎಷ್ಟು ಸರಿ ಎನ್ನುತ್ತಿದ್ದಾರೆ.. ಮತ್ತೇನು ಹೇಳಲಾಗದು.. ಮತ್ತೆ ಹುಟ್ಟಿ ಬಾ ಅರ್ಜುನ.. ತಾಯಿಯನ್ನು ಹೊತ್ತು ಮೆರೆಸಿದ ನಿನ್ನ ಸೇವೆಯನ್ನು ಕರುನಾಡು ಎಂದೂ ಮರೆಯದು.. ಮನುಷ್ಯರಿಂದ ಆದ ಈ ತಪ್ಪನ್ನು ಸಾಧ್ಯವಾದರೆ ಕ್ಷಮಿಸಿಬಿಡು.. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.